ಅಳುತ್ತಿದ್ದ 3 ದಿನದ ಶಿಶುವಿನ ಕಾಲು ಮುರಿದು ಸಿಟ್ಟು ತೀರಿಸಿಕೊಂಡ ವಾರ್ಡ್ ಬಾಯ್!
ಅಳುತ್ತಿದೆ ಎಂಬ ಕಾರಣಕ್ಕೆ ಮೂರು ದಿನದ ಪುಟ್ಟ ಕಂದಮ್ಮನ ಮೇಲೆ ತೀವ್ರವಾಗಿ ಕೋಪಗೊಂಡಿರುವ ವಾರ್ಡ್ ಬಾಯ್ ವೊಬ್ಬ ಶಿಶುವಿನ ಕಾಲು ಕಾಲು ಮುರಿದಿ ಸಿಟ್ಟು ತೀರಿಸಿಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು...

ಡೆಹ್ರಾಡೂನ್: ಅಳುತ್ತಿದೆ ಎಂಬ ಕಾರಣಕ್ಕೆ ಮೂರು ದಿನದ ಪುಟ್ಟ ಕಂದಮ್ಮನ ಮೇಲೆ ತೀವ್ರವಾಗಿ ಕೋಪಗೊಂಡಿರುವ ವಾರ್ಡ್ ಬಾಯ್ ವೊಬ್ಬ ಶಿಶುವಿನ ಕಾಲು ಕಾಲು ಮುರಿದಿ ಸಿಟ್ಟು ತೀರಿಸಿಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರಾಖಂಡದ ರೂರ್ಕಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಜನವರಿ 25 ರಂದು ಶಿಶು ಜನಿಸಿತ್ತು. ಶಿಶು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕಾರಣ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ನಿರಂತರವಾಗಿ ಅಳುತ್ತಿತ್ತು. ಇದರಿಂದ ಕಿರಿಕಿರಿಗೊಂಡಿದ್ದ ವಾರ್ಡ್ ಬಾಯ್ ಕೋಪಗೊಂಡಿದ್ದ. ವಾರ್ಡ್ ನಲ್ಲಿ ತಾನು ಒಬ್ಬನೇ ಇರುವಾಗ ಶಿಶುವಿನ ಕಾಲು ಮುರಿದಿ ರಕ್ಕಸತನವನ್ನು ಮರೆದಿದ್ದಾನೆ. ಘಟನೆ ಜನವರಿ 28 ರಂದು ನಡೆದಿದ್ದು, ವಾರ್ಡ್ ಬಾಯ್'ನ ರಾಕ್ಷಸ ವರ್ತನೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಾರ್ಡ್ ಬಾಯ್ ನಡೆಸಿದ್ದ ಈ ರಾಕ್ಷಸ ವರ್ತನೆ ಯಾರಿಗೂ ತಿಳಿದಿರಲಿಲ್ಲ. ಮಗು ನೋವಿನಿಂದ ಸುದೀರ್ಘವಾಗಿ ಅಳುತ್ತಿದ್ದರಿಂದಾಗಿ ರೂರ್ಕಿ ಆಸ್ಪತ್ರೆಯ ವೈದ್ಯರು ಶಿಶುವನ್ನು ಡೆಹ್ರಾಡೂನ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಶಿಶುವನ್ನು ಪರಿಶೀಲಿಸಿದ ವೈದ್ಯರು ಮಗುವಿನ ಕಾಲು ಮುರಿದಿರುವುದಾಗಿ ಹೇಳಿದ್ದಾರೆ.
ಘಟನೆ ಸಂಬಂಧ ಶಿಶುವಿನ ಪೋಷಕರು ವಾರ್ಡ್ ಬಾಯ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋವನ್ನು ಕೆಲ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದು, ವಾರ್ಡ್ ಬಾಯ್'ನ ಈ ರಕ್ಕಸ ವರ್ತನೆಗೆ ಸಾಕಷ್ಟು ಆಕ್ರೋಶಭರಿತ ಟೀಕೆಗಳು ವ್ಯಕ್ತವಾಗತೊಡಗಿವೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಹರಿದ್ವಾರ ಎಸ್ಎಸ್'ಪಿ ಕೃಷ್ಣ ಕುಮಾರ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


