ಕುಟುಂಬದಲ್ಲಿ ಭಿನ್ನಾಭಿಪ್ರಾಯವಿಲ್ಲ, ಅಖಿಲೇಶ್ ಮುಂದಿನ ಮುಖ್ಯಮಂತ್ರಿ: ಮುಲಾಯಂ
ಸಮಾಜವಾದಿ ಪಕ್ಷದ ಕುಟುಂಬದಲ್ಲಿ ಯಾವುದೇ ಹಗೆತನದ ಬೆಳವಣಿಗೆಗಳಿಲ್ಲ. ಉತ್ತರಪ್ರದೇಶದಲ್ಲಿ ನಮ್ಮ ಪಕ್ಷ ಗೆಲವು ಸಾಧಿಸಿದ್ದೇ ಆದರೆ, ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಲಿದ್ದಾರೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್...

ನವದೆಹಲಿ: ಸಮಾಜವಾದಿ ಪಕ್ಷದ ಕುಟುಂಬದಲ್ಲಿ ಯಾವುದೇ ಹಗೆತನದ ಬೆಳವಣಿಗೆಗಳಿಲ್ಲ. ಉತ್ತರಪ್ರದೇಶದಲ್ಲಿ ನಮ್ಮ ಪಕ್ಷ ಗೆಲವು ಸಾಧಿಸಿದ್ದೇ ಆದರೆ, ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಲಿದ್ದಾರೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಕುಟುಂಬದಲ್ಲಿ ದ್ವೇಷದ ಬೆಳವಣಿಗೆಗಳು ತಾರಕ್ಕೇರಿದೆ ಎಂಬ ವದಂತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಖಿಲೇಶ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ನಾಳೆಯಿಂದಲೇ ನಾವು ಚುನಾವಣಾ ಪ್ರಚಾರವನ್ನು ಆರಂಭ ಮಾಡಲಿದ್ದೇವೆ. ಪಕ್ಷದಲ್ಲಿನ ಬೆಳವಣಿಗೆಗಳಿಂಗ ಅಮರ್ ಸಿಂಗ್ ಅವರಿಗೆ ಬೇಸರವಾಗಿಲ್ಲ. ಪಕ್ಷದ ಕುರಿತ ಕೆಲಸಗಳಿಗೆ ಅಖಿಲೇಶ್'ಗೆ ಸಂಪೂರ್ಣ ಸ್ವತಂತ್ರವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ಬಳಿಕ ತೀವ್ರ ಅಸಮಾಧಾನಗೊಂಡಿದ್ದ ಮುಲಾಯಂ ಅವರ ಹೀ ಹಿಂದೆ ಸಹೋದರ ಶಿವಪಾಲ್ ಯಾದವ್ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು.
ಇದೀಗ ಅಖಿಲೇಶ್ ಪರವಾಗಿ ಮುಲಾಯಂ ಸಿಂಗ್ ಅವರು ಮಾತನಾಡುತ್ತಿರುವುದು ಶಿವಪಾಲ್ ಅವರಿಗೆ ಬೇಸರವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿತ್ತು.
ಇದಕ್ಕೆ ಸ್ಪಷ್ಟನೆ ನೀಡಿರುವ ಮುಲಾಯಂ ಅವರು, ಪಕ್ಷದಲ್ಲಿನ ಬೆಳವಣಿಗೆಗಳಿಂದ ಶಿವಪಾಲ್ ಅವರಿಗೆ ಯಾವುದೇ ರೀತಿಯ ಬೇಸರವಾಗಿಲ್ಲ. ಪಕ್ಷದಲ್ಲಿ ಯಾರೊಬ್ಬರು ಅಸಮಾಧಾನಗೊಂಡಿಲ್ಲ. ನಾನಿಲ್ಲದೆಯೇ ಶಿವಪಾಲ್ ಅವರು ಹೊಸ ಪಕ್ಷ ಕಟ್ಟಲು ಹೇಗೆತಾನೆ ಸಾಧ್ಯ?. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿಗೊಂಡಿರುವ ಹಿನ್ನಲೆಯಲ್ಲಿ ಎರಡೂ ಪಕ್ಷಗಳ ಕಡೆಗೂ ನಾವು ಪ್ರಚಾರವನ್ನು ನಡೆಸುತ್ತೇವೆ. ಎಂದು ಹೇಳಿದ್ದಾರೆ.
ಜಸ್ವಂನಗರದ ನಾಮನಿರ್ದೇಶನದಿಂದ ಶಿವಪಾಲ್ ಯಾದವ್ ಅವರ ಹೆಸರನ್ನು ಕೈಬಿಟ್ಟ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಶಿವಪಾಲ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಉತ್ತರಪ್ರದೇಶ ಚುನಾವಣೆ ಅಂತ್ಯಗೊಂಡು ಫಲಿತಾಂಶ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಹೊಸ ಪಕ್ಷ ಕಟ್ಟುವ ಕುರಿತಂತೆ ಘೋಷಣೆ ಮಾಡುತ್ತೇನೆಂದು ಹೇಳಿದ್ದರು.
ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳ ವಿರುದ್ದ ಬಹುಜನ ಸಮಾಜ ಪಕ್ಷ ಹಾಗೂ ಬಿಜೆಪಿ ಪಕ್ಷಗಳು ತೀವ್ರ ಕಿಡಿಕಾರಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


