ವಿಶ್ವದಾದ್ಯಂತ ಸಂಭ್ರಮದ ಕ್ರಿಸ್'ಮಸ್ ಆಚರಣೆ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ
ವಿಶ್ವದಾದ್ಯಂತ ಸಂಭ್ರಮದ ಕ್ರಿಸ್'ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ...

Published On :
ನವದೆಹಲಿ: ವಿಶ್ವದಾದ್ಯಂತ ಸಂಭ್ರಮದ ಕ್ರಿಸ್'ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿರುವ ಅವರು, ಪ್ರತೀಯೊಬ್ಬರಿಗೂ ಕ್ರಿಸ್'ಮಸ್ ಹಬ್ಬದ ಶುಭಾಶಯಗಳು. ಕ್ರಿಸ್'ಮಸ್ ಹಬ್ಬದ ದಿನವಾದ ಇಂದು ಯೇಸು ಕ್ರಿಸ್ತನ ಶ್ರೇಷ್ಠ ಬೋಧನೆಗಳನ್ನು ನೆನೆಯುತ್ತಿದ್ದೇವೆಂದು ಹೇಳಿದ್ದಾರೆ.
ವಿಶ್ವದಾದ್ಯಂತ ಕ್ರಿಸ್'ಮಸ್ ಹಬ್ಬುನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾತ್ರಿಯಿಂದಲೇ ಚರ್ಚ್'ಗಳಿಗೆ ತೆರಳಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ಕ್ರಿಸ್'ಮಸ್ ಅಂಗವಾಗಿ ಚರ್ಚ್'ಗಳಿಗೆ ದೀಪಾಲಂಕಾಗಳನ್ನು ಮಾಡಲಾಗಿತ್ತು. ರಾತ್ರಿಯಿಂದಲೇ ಚರ್ಚ್'ಗಳಲ್ಲಿ ವಿಶೇಷ ಪ್ರವಚನ ನಡೆಸಲಾಗುತ್ತಿದೆ. ಯೇಸು ಪ್ರಭುವಿಗೆ ನಮನಗಳನ್ನು ಸಲ್ಲಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


