ದೇಶ

ಮಿಜಾರಾಂ: ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಮಿಜೋರಾಂಗೆ ಪ್ರಯಾಣಿಸಿರುವ ಪ್ರಧಾನಿ ಮೋದಿ ಶನಿವಾರ ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದರು.

ಮಿಜಾರಾಂ: ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ
ಜಲ ವಿದ್ಯುತ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Published On :
ಮಿಜೋರಾಂ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಮಿಜೋರಾಂಗೆ ಪ್ರಯಾಣಿಸಿರುವ ಪ್ರಧಾನಿ ಮೋದಿ ಶನಿವಾರ ತುಯಿರಿಯಲ್ ಜಲವಿದ್ಯುತ್ ಯೋಜನೆ ಉದ್ಘಾಟಿಸಿದರು.
ಈ ವೇಳೆ ಅಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿಕ್ಕಿಂ ತ್ರಿಪುರಾ ಬಳಿಕ ಮಿಜೋರಾಂ ಈಶಾನ್ಯ ಭಾರತದಲ್ಲಿ ವಿದ್ಯುತ್ ರಫ್ತು ಮಾಡುವ ಮೂರನೇ ರಾಜ್ಯವಾಗಿದೆ ಎಂದು ಹೇಳಿದರು.  ಅಂತೆಯೇ ಈಶಾನ್ಯ ಭಾರತದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದ್ದು, ಇದಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ಇಂದು ತುಯಿರಿಯಲ್  ಜಲವಿದ್ಯುತ್ ಯೋಜನೆ ಉದ್ಘಾಟನೆ ಮೂಲಕ ನಾವು ಮಹತ್ವದ ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಈ ಯೋಜನೆ ಮೂಲಕ ಮಿಜೋರಾಂನಲ್ಲಿ 60 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಆ ಮೂಲಕ ಸಿಕ್ಕಿಂ ತ್ರಿಪುರಾ  ಬಳಿಕ ಈಶಾನ್ಯ ಭಾರತದಲ್ಲಿ ಮಿಜಾರಾಂ ವಿದ್ಯುತ್ ರಫ್ತು ಮಾಡುವ ಮೂರನೇ ರಾಜ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈಶಾನ್ಯ ಭಾರತದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದು, ಮೇಘಾಲಯದಲ್ಲಿ ಬಿಜೆಪಿ ಘಟಕ ಕಚೇರಿಯನ್ನು ಉದ್ಘಾಟಿಸಿದರು. ಅಂತೆಯೇ ಮಿಜೋರಾಂನಲ್ಲಿ ಯುವ ಉದ್ಯಮಿಗಳ  ಹಲವು ಮೂಲ ಸೌಕರ್ಯಗಳ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. 
ಪ್ರಸ್ತುತ ಉದ್ಘಾಟನೆಯಾಗಿರುವ ತುಯಿರಿಯಲ್ ಜಲವಿದ್ಯುತ್ ಯೋಜನೆಗೆ 1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಶಂಕುಸ್ಥಾಪನೆ ನೆರವೇರಿಸಿತ್ತು. ಅಂದಿನಿಂದ ಕುಂಟುತ್ತಾ ಸಾಗಿದ್ದ ಈ ಯೋಜನೆ  ಇದೀಗ ಪೂರ್ಣಗೊಂಡಿದ್ದು, ಇಂದು ಉದ್ಘಾಟನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.