ದೇಶ

ಗುಜರಾತ್ ಚುನಾವಣೆ: ವಿವಿಪ್ಯಾಟ್‌ ಪರಿಶೀಲನೆ ಸುಪ್ರೀಂ ಕೋರ್ಟ್ ನಕಾರ

ವಿವಿಪ್ಯಾಟ್‌ ದಾಖಲೆಯನ್ನು ಇವಿಎಂ ಓಟಿನೊಡನೆ ಪರಿಶೀಲಿಸಬೇಕು ಎಂಬ ಕಾಂಗ್ರೆಸ್‌ ಪಕ್ಷ ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಗುಜರಾತ್ ಚುನಾವಣೆ: ವಿವಿಪ್ಯಾಟ್‌ ಪರಿಶೀಲನೆ ಸುಪ್ರೀಂ ಕೋರ್ಟ್ ನಕಾರ
ಮತಗಳ ವಿವಿಪ್ಯಾಟ್‌ ಪರಿಶೀಲನೆ ಕಾಂಗ್ರೆಸ್ ಪಕ್ಷದ ಬೇಡಿಕೆಗೆ ಸುಪ್ರೀಂ ನಕಾರ
Published On :
ನವದೆಹಲಿ: ವಿವಿಪ್ಯಾಟ್‌ ದಾಖಲೆಯನ್ನು ಇವಿಎಂ ಓಟಿನೊಡನೆ ಪರಿಶೀಲಿಸಬೇಕು ಎಂಬ ಕಾಂಗ್ರೆಸ್‌ ಪಕ್ಷ ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.
ಶೇ.25ರ ರಷ್ಟು ವಿವಿಪ್ಯಾಟ್‌ ಕಾಗದ ದಾಖಲೆಯನ್ನು ಇವಿಎಂ ಓಟ್‌ಗಳ ಜತೆಗೆ ಪರಿಶೀಲಿಸಿ ಮತ ಎಣಿಕೆ ಮಾಡುವಂತೆ ಚನಾವಣಾ ಆಯೋಗಕ್ಕೆ ನಿರ್ದೇಶ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ ಗೆ ಮನವಿ ಸಲ್ಲಿಸಿತ್ತು. 
ಪಕ್ಷ ಸಲ್ಲಿಸಿದ್ದ ಮನವಿಯಲ್ಲಿ ಯಾವ ಹುರುಳಿಲ್ಲ ಎಂದ ನ್ಯಾಯಾಲಯವು ಗುಜರಾತ್ ಕಂಗ್ರೆಸ್ ಪಕ್ಷವು ಚುನಾವಣಾ ಸುಧಾರಣೆಗಾಗಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಕ್ಕೆ ಬನ್ನಿ ಎಂದು ಹೇಳಿದೆ.
ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸುವುದು ಅಪಾಯ, ಇವಿಎಂಗಳನ್ನು ತಿರುಚಲಾಗುತ್ತಿದೆ. ಇವಿಎಂ ಗೆ ಬ್ಲೂ ಟೂತ್‌ ಉಪಕರಣವನ್ನು ಅಳವಡಿಸಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಕಳವಳ ವ್ಯಕ್ತಪಡಿಸಿತ್ತು. ಆದರೆ ಕಾಂಗ್ರೆಸ್ ನ ಆರೋಪವನ್ನು ತಿರಸ್ಕರಿಸಿದ ಬಿಜೆಪಿ 'ಚುನಾವಣೆಯಲ್ಲಿ ಸೋಲುತ್ತೇನೆನ್ನುವ ಭಯಕ್ಕೆ ಕಾಂಗ್ರೆಸ್ ಈ ಹೊಸ ನೆಪ ಹುಡುಕಿದೆ' ಎಂದು ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.