ದೇಶ

ಉದ್ಯಮಿಗಳಿಗೆ ಎಗ್ಗಿಲ್ಲದೇ ಸಾಲ ನೀಡಲು ಯುಪಿಎ ಅವಧಿಯಲ್ಲಿ ಬ್ಯಾಂಕ್ ಗಳಿಗೆ ಒತ್ತಡ, ಸಾರ್ವಜನಿಕ ಹಣ ಲೂಟಿ: ಮೋದಿ

ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಿರ್ದಿಷ್ಟ ಉದ್ಯಮಿಗಳಿಗೆ ಕೋಟ್ಯಂತರ ಸಾಲ ನೀಡಲು...

ಉದ್ಯಮಿಗಳಿಗೆ ಎಗ್ಗಿಲ್ಲದೇ ಸಾಲ ನೀಡಲು ಯುಪಿಎ ಅವಧಿಯಲ್ಲಿ ಬ್ಯಾಂಕ್ ಗಳಿಗೆ ಒತ್ತಡ, ಸಾರ್ವಜನಿಕ ಹಣ ಲೂಟಿ: ಮೋದಿ
ನರೇಂದ್ರ ಮೋದಿ
Published On :
ನವದೆಹಲಿ: ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಿರ್ದಿಷ್ಟ ಉದ್ಯಮಿಗಳಿಗೆ ಕೋಟ್ಯಂತರ ಸಾಲ ನೀಡಲು ಬ್ಯಾಂಕ್ ಗಳ ಮೇಲೆ ಒತ್ತಡ ಹೇರಲಾಗಿತ್ತು, ಇದು 2 ಜಿ, ಕಲ್ಲಿದ್ದಲು, ಕಾಮನ್ ವೆಲ್ತ್ ಹಗರಣಕ್ಕಿಂತಲೂ ದೊಡ್ಡ ಹಗರಣ ಎಂದು ಮೋದಿ ಆರೋಪಿಸಿದ್ದಾರೆ. 
ಇಂಡಸ್ಟ್ರಿ ಅಸೋಸಿಯೇಷನ್ ಎಫ್ಐಸಿಸಿಐ ನ 90 ನೇ ಎಜಿಎಂ ನಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನಾನ್ ಪರ್ಫಾರ್ಮಿಂಗ್ ಅಸೆಟ್(ಎನ್ ಪಿಎ) ಅಥವಾ ಬ್ಯಾಡ್ ಲೋನ್ ಗಳ ಸಮಸ್ಯೆ ಈ ಹಿಂದಿನ ಆಡಳಿತಾವಧಿಯಲ್ಲಿದ್ದ ಅರ್ಥಶಾಸ್ತ್ರಜ್ಞರ ಬಳುವಳಿ ಎಂದು ಹೇಳಿದ್ದಾರೆ. 
ಕಳೆದ ಸರ್ಕಾರದ ಅವಧಿಯಲ್ಲಿ ನಿರ್ದಿಷ್ಟ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡುವುದಕ್ಕೆ ಬ್ಯಾಂಕ್ ಗಳ ಮೇಲೆ ಒತ್ತಡವಿತ್ತು, ಇದು ಸಾರ್ವಜನಿಕರ ಹಣದ ಲೂಟಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಬ್ಯಾಂಕ್ ಗಳಲ್ಲಿರುವ ಠೇವಣಿಗಳು ಸುರಕ್ಷಿತವಾಗಿರುತ್ತವೆ ಎಂದು ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಪ್ರಸ್ತಾವಿತ ಎಫ್ಆರ್ ಡಿಐ ಬಿಲ್ ನ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಸರ್ಕಾರ ಬ್ಯಾಂಕ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಯತ್ನಿಸುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎಫ್ ಆರ್ ಡಿಐ ಬಿಲ್ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದ್ದು, ಮಸೂದೆಯಲ್ಲಿರುವ ಅಂಶಗಳಿಗೆ ತದ್ವಿರುದ್ಧವಾದದ್ದನ್ನೇ ಹಬ್ಬಿಸಲಾಗುತ್ತಿದೆ. ಬ್ಯಾಂಕ್ ಗಳು ಹಾಗೂ ಅದರಲ್ಲಿರುವ ಠೇವಣಿಗಳನ್ನು ಸುರಕ್ಷಿತವಾಗಿರಿಸಲು ನಾವು ಯತ್ನಿಸುತ್ತಿದ್ದೇವೆ ಎಂದು ಮೋದಿ ಹೇಳಿದ್ದು ಬ್ಯಾಂಕ್ ಗಳಲ್ಲಿರುವ ಠೇವಣಿಗಳು ಸುರಕ್ಷಿತವಾಗಿರುತ್ತವೆ ಎಂದು ಭರವಸೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.