ದೇಶ

ರೈಲ್ವೆಯ ಸ್ವರೂಪಕ್ಕೆ ಧಕ್ಕೆಯುಂಟಾಗಿದೆ, ಗ್ರಹಿಕೆ ಬದಲಾಯಿಸಬೇಕಾಗಿದೆ: ಅಶ್ವನಿ ಲೊಹನಿ

ಇತ್ತೀಚಿನ ಸರಣಿ ಅಪಘಾತಗಳ ನಂತರ ರೈಲ್ವೆ ಬಗ್ಗೆ ಜನರ ಗ್ರಹಿಕೆ ಬದಲಾಗಿದ್ದು, ಇದರಿಂದ ಇಲಾಖೆಗೆ...

ರೈಲ್ವೆಯ ಸ್ವರೂಪಕ್ಕೆ ಧಕ್ಕೆಯುಂಟಾಗಿದೆ, ಗ್ರಹಿಕೆ ಬದಲಾಯಿಸಬೇಕಾಗಿದೆ: ಅಶ್ವನಿ ಲೊಹನಿ
ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ಹುದ್ದೆ ಸ್ವೀಕರಿಸಿದ ಅಶ್ವನಿ ಲೊಹನಿ
Published On :
ನವದೆಹಲಿ: ಇತ್ತೀಚಿನ ಸರಣಿ ಅಪಘಾತಗಳ ನಂತರ ರೈಲ್ವೆ ಬಗ್ಗೆ ಜನರ ಗ್ರಹಿಕೆ ಬದಲಾಗಿದ್ದು, ಇದರಿಂದ ಇಲಾಖೆಗೆ ತೀವ್ರ ಹಿನ್ನಡೆಯಾಗಿದೆ ಎಂದು ರೈಲ್ವೆ ಮಂಡಳಿ ನೂತನ ಅಧ್ಯಕ್ಷ ಅಶ್ವನಿ ಲೊಹನಿ ಹೇಳಿದ್ದಾರೆ.
ರೈಲ್ವೆ ಮಂಡಳಿ ಹೊರಡಿಸಿರುವ ಪ್ರಕಟಣೆಯಲ್ಲಿ, ಇಲಾಖೆಯ ನ್ಯೂನತೆ ಮತ್ತು ವ್ಯವಸ್ಥೆ ಬಗ್ಗೆ ಆಳವಾಗಿ ಆತ್ಮಾವಲೋಕನ ಮಾಡುವ ಸಮಯ ಇದಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ಅನಾಹುತಗಳಾಗದಂತೆ ದೀರ್ಘಾವಧಿಯ ಪರಿಹಾರ ಹುಡುಕಬೇಕು ಎಂದು ರೈಲ್ವೆ ಉತ್ತರ ವಿಭಾಗದ ಕಿರಿಯ ಅಧಿಕಾರಿಗಳಿಗೆ ಲೊಹಣಿ ಸೂಚಿಸಿದ್ದಾರೆ ಎಂದು ಹೇಳಿದೆ.
ಇತ್ತೀಚಿನ ಸರಣಿ ಅಪಘಾತಗಳಿಂದ ರೈಲ್ವೆ ಇಲಾಖೆಯ ಕುರಿತು ಜನರ ಭಾವನೆ ಬದಲಾಗುತ್ತಿದೆ. ಇದು ಇಲಾಖೆಗೆ ತೀವ್ರ ನಷ್ಟವಾಗಿದೆ ಎಂದು ಲೊಹನಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.