ಅಮೆರಿಕಾದ ಸಿಇಎ ಗೆ ಆಧಾರ್ ಮಾಹಿತಿ ಸೋರಿಕೆ?
ಕಿಲೀಕ್ಸ್ ಇತ್ತೀಚೆಗೆ ಅಮೆರಿಕದ ಸಿಐಎ ಭಾರತೀಯ ನಾಗರಿಕರ ವಿಶಿಷ್ಟ ಗುರುತಿನ ಡೇಟಾವನ್ನು (ಆಧಾರ್) ಮಾಹಿತಿಯನ್ನು ಆಕ್ಸಸ್ ಮಾಡುತ್ತಿದೆ ಎಂದು ತನ್ನ ರಹಸ್ಯ ವರದಿಯಲ್ಲಿ ಬಹಿರಂಗಪಡಿಸಿದೆ.

Published On :
ವಿಸ್ಲಿಬ್ಲವರ್ ಸೈಟ್ ವಿಕಿಲೀಕ್ಸ್ ಇತ್ತೀಚೆಗೆ ಅಮೆರಿಕದ ಕೇಂದ್ರೀಯ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಭಾರತೀಯ ನಾಗರಿಕರ ವಿಶಿಷ್ಟ ಗುರುತಿನ ಡೇಟಾವನ್ನು (ಆಧಾರ್) ಮಾಹಿತಿಯನ್ನು ಆಕ್ಸಸ್ ಮಾಡುತ್ತಿದೆ ಎಂದು ತನ್ನ ರಹಸ್ಯ ವರದಿಯಲ್ಲಿ ಬಹಿರಂಗಪಡಿಸಿದೆ.
ಅಮೆರಿಕದ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಹೆಸರಿನ ಸೈಬರ್ ಗೂಢಚರ ಸಂಸ್ಥೆ ಆಧಾರ್ ದತ್ತಾಂಶಗಳನ್ನು ಪಡೆದು ಸಿಐಎಗೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಭಾರತದಲ್ಲಿ ತನ್ನ ಪಾಲುದಾರ ಸಂಸ್ಥೆ ಸ್ಮಾರ್ಟ್ ಐಡೆಂಟಿಟಿ ಡಿವೈಸ್ ಪ್ರೈ.ಲಿ. ಜೊತೆಗೆ ಸೇರಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ 12 ಲಕ್ಷ ಮಂದಿ ಆಧಾರ್ ನೋಂದಣಿ, ಬಯೋಮೆಟ್ರಿಕ್‌ಗಳನ್ನು ಪಡೆಯಲು ನೆರವಾಗಿದೆ. ಈ ಮೂಲಕ ದತ್ತಾಂಶಗಳನ್ನು ಸಪಡೆದಿದೆ ಎನ್ನಲಾಗಿದೆ. ಪ್ರಕರಣದ ಕುರಿತಾಗಿ ವಿಕಿಲೀಕ್ಸ್ ಟ್ವೀಟ್ ಮಾಡಿದ್ದು, ಆಧಾರ್ ಮಾಹಿತಿಯನ್ನು ಈಗಾಗಲೇ ಸಿಐಎ ಕದ್ದಿದೆಯೆ? ಎಂದು ಪ್ರಶ್ನೆ ಮಾಡಿದೆ.
ಆದರೆ ಮೂಲಗಳು ಹೇಳುವಂತೆ ಕ್ರಾಸ್ ಮ್ಯಾಚ್ ಬಯೋಮೆಟ್ರಿಕ್ ಸಾಧನಗಳನ್ನು ಪೂರೈಸುವ ಜಾಗತಿಕ ಸಂಸ್ಥೆಯಾಗಿದ್ದು, ಪಡೆದ ದತ್ತಾಂಶಗಳನ್ನು ಗೂಢಲಿಪಿಯನ್ನಾಗಿಸಿ, ಆಧಾರ್ ಸರ್ವರ್ ಗೆ ಕಳಿಸುತ್ತದೆ. ವಿಕಿಲೀಕ್ಸ್ ವರದಿಯಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಆಧಾರ್ ಅನ್ನು ಸುರಕ್ಷಿತವಾಗಿ ಗೂಢಲಿಪಿಯನ್ನಾಗಿಸಿ ಇಡಲಾಗಿದ್ದು, ಯಾವುದೇ ಏಜೆನ್ಸಿಗಳಿಗೆ ಅದನ್ನು ಪಡೆಯಲು ಸಾಧ್ಯವಿಲ್ಲೀಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


