ದೇಶ

ರಕ್ಷಣಾ ಸಚಿವಾಲಯವನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಬೇಕು: ಉದ್ಧವ್ ಠಾಕ್ರೆ

ಡೋಕ್ಲಾಮ್ ವಿವಾದ ಸಂಬಂಧ ಚೀನಾದೊಂದಿಗೆ ಯುದ್ಧದ ವಾತಾವರಣ ಹಾಗೂ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ದೇಶ ಹೋರಾಟ ಮಾಡುತ್ತಿದ್ದು, ರಕ್ಷಣಾ ಸಚಿವಾಲಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಶಿವಸೇನಾ...

ರಕ್ಷಣಾ ಸಚಿವಾಲಯವನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಬೇಕು: ಉದ್ಧವ್ ಠಾಕ್ರೆ
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
Published On :
ಮುಂಬೈ: ಡೋಕ್ಲಾಮ್ ವಿವಾದ ಸಂಬಂಧ ಚೀನಾದೊಂದಿಗೆ ಯುದ್ಧದ ವಾತಾವರಣ ಹಾಗೂ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ದೇಶ ಹೋರಾಟ ಮಾಡುತ್ತಿದ್ದು, ರಕ್ಷಣಾ ಸಚಿವಾಲಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಚೀನಾದೊಂದಿಗಿನ ಯುದ್ಧದ ವಾತಾವರಣ ಹಾಗೂ ಭಾರತದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಇಂದಿಗೂ ನಿಂತಿಲ್ಲ. ಭಾರತ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ರಕ್ಷಣಾ ಸಚಿವಾಲಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಂಭೀರವಾಗಿ ಪರಿಗಣಿಸಬೇಕು. ರಕ್ಷಣಾ ಸಚಿವಾಲಯದ ವಿಚಾರದಲ್ಲಿ ಆಟವಾಡಬಾರದು ಎಂದು ಹೇಳಿದ್ದಾರೆ. 
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಇಂದು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಿನ್ನೆಯಷ್ಟೇ ವರದಿಯೊಂದನ್ನು ನಾನು ಓದಿದ್ದೆ, ಚುನಾವಣೆಯಲ್ಲಿ ಪರಿಕ್ಕರ್ ಸೋಲು ಕಂಡಿದೇದೇ ಆದರೆ, ರಕ್ಷಣಾ ಸಚಿವಾಲಯಕ್ಕೆ ಮರಳಲಿದ್ದಾರೆಂದು ಹೇಳಲಾಗಿತ್ತು. ಸಚಿವಾಲಯವನ್ನು ಈ ರೀತಿಯಾಗಿ ಹಗುರವಾಗಿ ತೆಗೆದುಕೊಂಡರೆ, ದೇಶದಲ್ಲಿ ಅರಾಜಕತೆ ಮೇಲುಗೈ ಸಾಧಿಸುತ್ತದೆ. ಚುನಾವಣೆಯಲ್ಲಿ ಪರಿಕ್ಕರ್ ಅವರ ಸೋಲು ಅಥವಾ ಗೆಲವು ಅಭೌತಿಕವಾದದ್ದು. ಹೀಗಾಗಿ ರಕ್ಷಣಾ ಸಚಿವಾಲಯನ್ನು ಮೋದಿಯವರು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಾರೆ. 
ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಿರುದ್ಧ ಕಿಡಿಕಾರಿರುವ ಅವರು, ಸರ್ಕಾರ ರೈತರ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಿದರೆ, ದೇಶದಲ್ಲಿ ಶಾಸನೋಲ್ಲಂಘನೆಯಾಗುತ್ತದೆ ಎಂದು ಫಡ್ನವೀಸ್ ಹೇಳುತ್ತಿದ್ದಾರೆ. ವಾಸ್ತವತೆ ಹೇಳುವುದಾದರೆ, ಸೋತ ಮುಖ್ಯಮಂತ್ರಿ (ಪರಿಕ್ಕರ್) ದೆಹಲಿ ಹೋದರೆ, ದೇಶದಲ್ಲಿಯೂ ಅರಾಜಕತೆ ಎದುರಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.