ಡೋಕ್ಲಾಮ್ ವಿವಾದ: ಗಡಿ ನುಗ್ಗಲು ಯತ್ನ, ಚೀನೀ ಸೇನೆಯನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ
ಅತ್ತ ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಇತ್ತ ಲಡಾಖ್ ನಲ್ಲೂ ಭಾರತೀಯ ಹಾಗೂ ಚೀನಾ ಪಡೆಗಳ ನಡುವೆ ಸಣ್ಣ ಪ್ರಮಾಣದಲ್ಲಿ ಸಂಘರ್ಷ ಉಂಟಾಗಿದೆ...

Published On :
ನವದೆಹಲಿ: ಅತ್ತ ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಇತ್ತ ಲಡಾಖ್ ನಲ್ಲೂ ಭಾರತೀಯ ಹಾಗೂ ಚೀನಾ ಪಡೆಗಳ ನಡುವೆ ಸಣ್ಣ ಪ್ರಮಾಣದಲ್ಲಿ ಸಂಘರ್ಷ ಉಂಟಾಗಿದೆ.
ಲಡಾಖ್ ಬಳಿಯಿರುವ ಭಾರತೀಯ ಭೂಭಾಗವನ್ನು ಪ್ರವೇಶಿಸಲು ಚೀನಾ ಸೈನಿಕರು ಯತ್ನಿಸಿದ್ದು, ಚೀನೀ ಸೈನಿಕರ ಹಿಮ್ಮೆಟ್ಟಿಸುವಲ್ಲಿ ಭಾರತದ ಪಡೆಗಳು ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ಯಾಂಗಾಂಗ್ ಸರೋವರದ ಬಳಿಯ 'ಫಿಂಗರ್ 4" ಹಾಗೂ 'ಫಿಂಗರ್ 5' ಭೂಭಾಗದಲ್ಲಿ ನಿನ್ನೆ ಬೆಳಿಗ್ಗೆ 6 ರಿಂದ 9ರವರೆಗೆ ವಾಸ್ತವ ಗಡಿ ರೇಖೆ (ಎಲ್ಎಸಿ) ದಾಟಿ ಬರಲು ಚೀನಾ ಸೈನಿಕರು 2 ಬಾರಿ ಯತ್ನ ನಡೆಸಿವೆ. ಈ ವೇಳೆ ಭಾರತೀ ಸೇನೆ ಮಾನವ ತಡೆಗೋಡೆ ನಿರ್ಮಿಸಿ ಅವರನ್ನು ತಡೆಯಲೆತ್ನಿಸಿದರು. ಈ ವೇಳೆ ಚೀನೀ ಸೈನಿಕರು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ತಿಳಿದುಬಂದಿದೆ.
ಚೀನಾ ಸೇನೆ ಕಲ್ಲು ತೂರಾಟ ನಡೆಸುತ್ತಿದ್ದಂತೆಯೇ ಭಾರತೀಯ ಸೇನೆ ಕೂಡ ದಿಟ್ಟ ಉತ್ತರ ನೀಡುವ ಮೂಲಕ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಘಟನೆ ವೇಳೆ ಉಭಯ ಸೇನಾ ಪಡೆಗಳ ಯೋಧರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಚೀನಾ ಸೈನಿಕರ ಈ ವರ್ತನೆಯ ಬಗ್ಗೆ ಚೀನಾ ಸರ್ಕಾರಕ್ಕೆ ಪ್ರತಿಭಟನೆ ಸಲ್ಲಿಸಲು ಹಾಗೂ ಚೀನಾ ಸೇನೆಯ ಜೊತೆ ಧ್ವಜ ಸಭೆ ನಡೆಯಲು ಭಾರತ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


