ಮೊದಲು ಮುಸ್ಲಿಮರು, ನಂತರ ಭಾರತೀಯರು: ಸಮಾಜವಾದಿ ಪಕ್ಷದ ಮುಖಂಡ
ಉತ್ತರಪ್ರದೇಶದ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಬೇಕು. ಅಲ್ಲದೆ, ಅದರ ವಿಡಿಯೋವನ್ನು ದಾಖಲಿಸಿಕೊಂಡಿರಬೇಕು ಎಂಬ ರಾಜ್ಯ ಸರ್ಕಾರದ ವಿವಾದಾತ್ಮಕ ಸುತ್ತೋಲೆ ಕುರಿತು ಪರ ವಿರೋಧ ಚರ್ಚೆಯ ಬೆಂಕಿಗೆ ಸಮಾಜವಾದಿ ಪಕ್ಷ...

Published On :
ಲಖನೌ: ಉತ್ತರಪ್ರದೇಶದ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಬೇಕು. ಅಲ್ಲದೆ, ಅದರ ವಿಡಿಯೋವನ್ನು ದಾಖಲಿಸಿಕೊಂಡಿರಬೇಕು ಎಂಬ ರಾಜ್ಯ ಸರ್ಕಾರದ ವಿವಾದಾತ್ಮಕ ಸುತ್ತೋಲೆ ಕುರಿತು ಪರ ವಿರೋಧ ಚರ್ಚೆಯ ಬೆಂಕಿಗೆ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಸೋಮವಾರ ತುಪ್ಪ ಸುರಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡ ಸಮಾಜವಾದಿ ಪಕ್ಷ ಮುಖಂಡ ಮಾವಿಯಾ ಅಲಿ, ಸರ್ಕಾರದ ನಿರ್ದೇಶನಗಳನ್ನು ನಾವು ಪಾಲನೆ ಮಾಡುವುದಿಲ್ಲ. ನಾವು ಮೊದಲು ಮುಸ್ಲಿಮರು ಬಳಿಕ ಭಾರತೀಯರು ಎಂದು ಹೇಳಿದ್ದಾರೆ.
ಮದರಸಾಗಳಲ್ಲಿ ಸ್ವಾತಂತ್ರ್ಯೆ ದಿನಾಚರಣೆ ಆಚರಿಸುವುದು ಇಸ್ಲಾಂ ವಿರೋಧಿ. ಉತ್ತರಪ್ರದೇಶ ಸರ್ಕಾರದ ಸೂಚನೆಯನ್ನು ಪಾಲಿಸಲು ನಾವು ಸಿದ್ದರಿಲ್ಲ. ನಾವು ಮೊದಲು ಮುಸ್ಲಿಮರು, ನಂತರ ಭಾರತೀಯರು ಎಂದು ಮತ್ತೆ ಮತ್ತೆ ಹೇಳಬಯಸುತ್ತೇನೆ. ಒಂದು ವೇಳೆ ಇಸ್ಲಾಂ ವಿರೋಧಿ ಪರಿಸ್ಥಿತಿ ನಿರ್ಮಾಣವಾದರೆ, ನಾವು ಸಂವಿಧಾನಕ್ಕೆ ಬದ್ಧರಾಗಿರುವುದಿಲ್ಲ. ಇಸ್ಲಾಂ ನಮ್ಮ ಬದ್ಧತೆ ಎಂದು ತಿಳಿಸಿದರು.
ಉತ್ತರಪ್ರದೇಶದ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯವಾಗಿ ಆಚರಿಸಬೇಕು. ತ್ರಿವರ್ಣ ಧ್ವಜ ಹಾರಿಸಿ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವುದರ ಜತೆ ಕಾರ್ಯಕ್ರಮದ ವಿಡಿಯೋ ಮಾಡಬೇಕು ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ನೀಡಿತ್ತು.
ಸರ್ಕಾರದ ಆದೇಶ ಪಾಲಿಸದ ಮದರಸಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಮಾಲಿಯಾ ಅಲಿ ಈ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರಪ್ರದೇಶMuslimಸಮಾಜವಾದಿ ಪಕ್ಷSamajwadi Partyಮುಸ್ಲಿಂIndiansMaviya Aliಭಾರತೀಯಕರುಮಾವಿಯಾ ಅಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


