ದೇಶ

ಶಿಷ್ಟಾಚಾರ ಬದಿಗೊತ್ತಿ ನಾಲ್ಕರ ಬಾಲೆ ಭೇಟಿ ಮಾಡಿದ ಪ್ರಧಾನಿ ಮೋದಿ

ತವರು ರಾಜ್ಯ ಗುಜರಾತ್ ಪ್ರವಾದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಷ್ಟಾಚಾರವನ್ನು ಬದಿಗೊತ್ತಿ ನಾಲ್ಕು ವರ್ಷದ ಬಾಲಯಿತನ್ನು ನಡುರಸ್ತೆಯಲ್ಲಿಯೇ ಭೇಟಿ ಮಾಡಿ ಮಾತನಾಡಿರುವ ಘಟನೆ ಘಟನೆ ಸೋಮವಾರ...

ಶಿಷ್ಟಾಚಾರ ಬದಿಗೊತ್ತಿ ನಾಲ್ಕರ ಬಾಲೆ ಭೇಟಿ ಮಾಡಿದ ಪ್ರಧಾನಿ ಮೋದಿ
ಭದ್ರತೆ ಲೆಕ್ಕಿಸದೇ ವಾಹನಕ್ಕೆ ಅಡ್ಡ ಬಂದ ಬಾಲಕಿಯನ್ನು ಆಲಂಗಿಸಿ ಮಾತನಾಡಿಸಿದ ಮೋದಿ
Published On :
ಅಹಮದಾಬಾದ್: ತವರು ರಾಜ್ಯ ಗುಜರಾತ್ ಪ್ರವಾದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಷ್ಟಾಚಾರವನ್ನು ಬದಿಗೊತ್ತಿ ನಾಲ್ಕು ವರ್ಷದ ಬಾಲಯಿತನ್ನು ನಡುರಸ್ತೆಯಲ್ಲಿಯೇ ಭೇಟಿ ಮಾಡಿ ಮಾತನಾಡಿರುವ ಘಟನೆ ಘಟನೆ ಸೋಮವಾರ ನಡೆದಿದೆ. 
ಗುಜರಾತಿನ ತಾಪಿ ಜಿಲ್ಲೆಯಲ್ಲಿ ಹೋಗುತ್ತಿದ್ದ ವೇಳೆ ವಾಹನಕ್ಕೆ ಅಡ್ಡ ಬಂದ ಪುಟ್ಟ ಬಾಲಕಿಯೊಬ್ಬಳನ್ನು ಭದ್ರತಾ ಸಿಬ್ಬಂದಿಗಳು ಬದಿಗೆ ಸರಿಸುತ್ತಿರುವುದನ್ನು ಪ್ರಧಾನಿ ಮೋದಿಯವರು ನೋಡಿದ್ದಾರೆ. ಈ ವೇಳೆ ಕಾರನ್ನು ನಿಲ್ಲಿಸಲು ಸೂಚಿಸಿದ ಅವರು, ಬಾಲಕಿಯನ್ನು ಕರೆತರುವಂತೆ ಭದ್ರತಾ ಸಿಬ್ಬಂದಿಗಳಿಗೆ ಹೇಳಿದ್ದಾರೆ, ಕಾರಿನ ಬಳಿ ಬಂದ ಬಾಲಕಿಯನ್ನು ಆಲಂಗಿಸಿ ಮಾತನಾಡಿಸಿದ್ದಾರೆ. 
ಬಾಲಕಿಯ ಹೆಸರನ್ನು ಕೇಳಿದ ಮೋದಿ, ನಂತರ ಆಕೆ ಕೈಗೆ ಕಟ್ಟಿಕೊಂಡಿದ್ದ ದೊಡ್ಡ ವಾಚನ್ನು ನೋಡಿ ನಗುತ್ತಾ ಟೈ ಎಷ್ಟಾಗಿದೆ ಎಂದು ಕೇಳಿದ್ದಾರೆ. ನಂತರ ಮುದ್ದಿನಿಂದ ಬಾಲಕಿಯ ಕೆನ್ನೆ ಚಿವುಟಿ ಕಳುಹಿಸಿಕೊಟ್ಟಿದ್ದಾರೆ. 
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.