ದೇಶ

'ವಂದೇ ಮಾತರಂ' ವಿವಾದ: ಯೋಗಿ ಆದಿತ್ಯನಾಥ್ ಬೆನ್ನಿಗೆ ನಿಂತ ಸಮಾಜವಾದಿ ಪಕ್ಷ

ವಂದೇ ಮಾತರಂ ಗೀತೆ ಹಾಡದವರ ವಿರುದ್ಧ ಕಿಡಿಕಾರಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಬಲಕ್ಕೆ ಸಮಾಜವಾದಿ ಪಕ್ಷ ಭಾನುವಾರ ಬಂದಿದೆ...

'ವಂದೇ ಮಾತರಂ' ವಿವಾದ: ಯೋಗಿ ಆದಿತ್ಯನಾಥ್ ಬೆನ್ನಿಗೆ ನಿಂತ ಸಮಾಜವಾದಿ ಪಕ್ಷ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Published On :
ಲಖನೌ: ವಂದೇ ಮಾತರಂ ಗೀತೆ ಹಾಡದವರ ವಿರುದ್ಧ ಕಿಡಿಕಾರಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಬಲಕ್ಕೆ ಸಮಾಜವಾದಿ ಪಕ್ಷ ಭಾನುವಾರ ಬಂದಿದೆ. 
ಯೋಗಿ ಆದಿತ್ಯನಾಥ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ಸಮಾಜವಾದಿ ಪಕ್ಷದ ನಾಯಕ ಜೂಹಿ ಸಿಂಗ್ ಅವರು, ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಲು ಬಿಜೆಪಿ ನಾಯಕರು ಉನ್ನತ ನಾಯಕರ ಮಾತುಗಳನ್ನು ಕೇಳಬೇಕಿದೆ. ಪ್ರಕರಣ ಸಂಬಂಧ ಮುಖ್ಯಮಂತ್ರಿಗಳು ಕಾಳಜಿಯನ್ನು ವ್ಯಕ್ತಪಡಿಸಿದರೆ, ಅದನ್ನು ಪಕ್ಷದ ನಾಯಕರು ಗೌರವಿಸಬೇಕಿದೆ ಎಂದು ಹೇಳಿದ್ದಾರೆ. 
ನಿನ್ನೆಯಷ್ಟೇ ವಂದೇ ಮಾತರಂ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಯೋಗಿ ಆದಿತ್ಯನಾಥ್ ಅವರು, ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ದೇಶದ ಪ್ರತಿಯೊಬ್ಬ ನಾಗರೀಕರು ಹಾಡಲೇಬೇಕು. ವಂದೇ ಮಾತರಂ ಹಾಡಲು ನಿರಾಕರಿಸುವುದು ಗಂಭೀರ ವಿಚಾರವಾಗಿದ್ದು. ವಂದೇ ಮಾತರಂ ಹಾಡಲು ನಿಕಾರಿಸುವವರರು ಸಂಕುಚಿತ ಮನಸ್ಥಿತಿಯುಳ್ಳವರಾಗಿದ್ದಾರೆಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.