ಶ್ರೀನಗರ ಉಪ ಚುನಾವಣೆ ವೇಳೆ ಪ್ರತಿಭಟನಾಕಾರರು ಯೋಧರ ನಡುವೆ ಘರ್ಷಣೆ, 3 ಸಾವು
ಬುದ್ಗಾಮ್ ಜಿಲ್ಲೆಯ ಲೋಕಸಭೆ ಉಪ ಚುನಾವಣೆ ಮತದಾನದ ವೇಳೆ ನಡೆದ ಪ್ರತಿಭಟನಾಕಾರರು ಮತ್ತು ಗಡಿ ಭದ್ರತಾ ಯೋಧರ ನಡುವಿನ ಸಂಘರ್ಷದಲ್ಲಿ ಮೂವರು...

Published On :
ಶ್ರೀನಗರ: ಬುದ್ಗಾಮ್ ಜಿಲ್ಲೆಯ ಲೋಕಸಭೆ ಉಪ ಚುನಾವಣೆ ಮತದಾನದ ವೇಳೆ ನಡೆದ ಪ್ರತಿಭಟನಾಕಾರರು ಮತ್ತು ಗಡಿ ಭದ್ರತಾ ಯೋಧರ ನಡುವಿನ ಸಂಘರ್ಷದಲ್ಲಿ ಮೂವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
ಬುದ್ಗಾಮ್ ನ ಚರಾರ್-ಇ- ಷರೀಫ್ ಬಳಿಯ ಪಕೇರ್ಪೊರಾ ಮತಗಟ್ಟೆ ಬಳಿ ಪ್ರತಿಭಟನಾಕಾರರು ಗಡಿ ಭದ್ರತಾ ಪಡೆ ಯೋಧರ ಮೇಲೆ ಕಲ್ಲುಗಳನ್ನು ತೂರಿದ್ದು ಈ ಹಿನ್ನೆಲೆಯಲ್ಲಿ ಯೋಧರು ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಿಸಿದ್ದು ಇದರಲ್ಲಿ ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
ಮೊದಲ ಪ್ರತಿಭಟನಾಕಾರರಿಗೆ ಸ್ಥಳದಿಂದ ತೆರಳುವಂತೆ ಯೋಧರು ಸೂಚನೆ ನೀಡಿದರು. ಯೋಧರ ವಿರುದ್ಧ ಕಲ್ಲುಗಳನ್ನು ತೂರಿದ್ದರಿಂದ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಮೃತರನ್ನು 20 ವರ್ಷದ ಮೊಹಮ್ಮದ್ ಅಬ್ಬಾಸ್ ಮತ್ತು 15 ವರ್ಷದ ಫೈಜಾನ್ ಅಹಮದ್ ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶ್ರೀನಗರSrinagarಭದ್ರತಾ ಸಿಬ್ಬಂದಿsecurity forceಪ್ರತಿಭಟನಾಕಾರರುLok Sabha constituencybypollProtesterಲೋಕಸಭೆ ಉಪ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


