security force

Chhattisgarh: ಮಾವೋವಾದಿಗಳು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕಗಳ ವಶ!
ತಂಡವು ಮಾವೋವಾದಿಗಳು ಸಂಗ್ರಹಿಸಿಟ್ಟಿದ್ದ ಬಿಜಿಎಲ್‌ಗಳನ್ನು ತಯಾರಿಸಲು ಬಳಸುವ ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಛತ್ತೀಸಗಢ: ಗರಿಯಾಬಂದ್‌ನ ನಕ್ಸಲರ ಶಿಬಿರದಿಂದ 8 ಲಕ್ಷ ರೂ ನಗದು, ಸ್ಫೋಟಕ ವಶ
ವಶಪಡಿಸಿಕೊಂಡ ವಸ್ತುಗಳಲ್ಲಿ 8 ಲಕ್ಷ ರೂ. ನಗದು, 13 ಜೆಲೆಟಿನ್ ಸ್ಟಿಕ್‌ಗಳು, ಮಾವೋವಾದಿ ಬ್ಯಾನರ್‌ಗಳು, ಡೈರಿ ಮತ್ತು ಸಾಹಿತ್ಯ ಸೇರಿವೆ. ಇವುಗಳನ್ನು ಬಿಳಿ ಚೀಲದಲ್ಲಿ ಪ್ಯಾಕ್ ಮಾಡಿ ಮರದ ಕೆಳಗೆ ನೆಲದಲ್ಲಿ ಅಡಗಿಸಿ ಇಡಲಾಗಿತ್ತು.

ಮಣಿಪುರ: 42 ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ ನಾಗರಿಕರು; 5 ಬಂಕರ್‌ಗಳು ಧ್ವಂಸ
ಪೂರ್ವ ಮತ್ತು ಪಶ್ಚಿಮ ಇಂಫಾಲ್, ಚುರಾಚಂದ್‌ಪುರ, ಬಿಷ್ಣುಪುರ್ ಮತ್ತು ತಮೆಂಗ್‌ಲಾಂಗ್ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶನಿವಾರ ಬಂದೂಕುಗಳನ್ನು ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಛತ್ತೀಸ್‌ಗಢ: ಬಿಜಾಪುರದಲ್ಲಿ ಎನ್‌ಕೌಂಟರ್; 31 ನಕ್ಸಲರ ಹತ್ಯೆ, ಇಬ್ಬರು ಪೊಲೀಸರು ಹುತಾತ್ಮ
ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಜಮ್ಮು-ಕಾಶ್ಮೀರ: ದೋಡಾ ಎನ್‌ಕೌಂಟರ್, ಭಾರಿ ಗುಂಡಿನ ಚಕಮಕಿ ನಡುವೆ ಉಗ್ರರಿಗಾಗಿ ಶೋಧ ಮುಂದುವರಿಕೆ
ಭಯೋತ್ಪಾದಕರು ಶಿವಗಢ-ಅಸ್ಸಾರ್ ಬೆಲ್ಟ್‌ನಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ರಕ್ತದ ಕಲೆ ಕಂಡುಬಂದಿದ್ದು, ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ಛತ್ತೀಸಗಢ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ನಕ್ಸಲರು ಬಲಿ
ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಮದ್ದೇಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ. ಬಳಿಕ ಇಬ್ಬರು ನಕ್ಸಲರ ಮೃತದೇಹಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ಫ್ಯೂ ಉಲ್ಲಂಘಿಸಿ ಮಣಿಪುರ ಸಿಎಂ ಮನೆ ಮೇಲೆ ದಾಳಿಗೆ ಗುಂಪು ಯತ್ನ; ಭದ್ರತಾ ಪಡೆಗಳಿಂದ ತಡೆ
ಮಣಿಪುರದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಕರ್ಫ್ಯೂ ಉಲ್ಲಂಘನೆ ಮಾಡಿ ಸಿಎಂ ಮನೆ ಮೇಲೆ ದಾಳಿಗೆ ಗುಂಪೊಂದು ಯತ್ನಿಸಿದೆ. ಆದರೆ ಭದ್ರತಾ ಪಡೆಗಳು ಈ ಯತ್ನವನ್ನು ವಿಫಲಗೊಳಿಸಿವೆ.

ಪೂಂಚ್: ಒಳ ನುಸುಳುತ್ತಿದ್ದ ಪಾಕ್ ಶಂಕಿತ ಉಗ್ರನ ಹತ್ಯೆ, ಮತ್ತಿಬ್ಬರಿಗಾಗಿ ತೀವ್ರ ಶೋಧ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾನುವಾರ ಮುಂಜಾನೆ ಒಳನುಸುಳುತ್ತಿದ್ದ ಪಾಕಿಸ್ತಾನದ ಶಂಕಿತ ಉಗ್ರನನ್ನು ಸೇನಾ ಪಡೆಗಳು ಹತ್ಯೆಗೈಯುವ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಭಯೋತ್ಪಾದಕ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

