ವೆಬ್'ಸೈಟ್, ಸಾಮಾಜಿಕ ಜಾಲತಾಣಗಳಲ್ಲಿ 'ಎರಡು ಎಲೆ' ಚಿಹ್ನೆ ಬಳಕೆ ಬೇಡ: ಶಶಿಕಲಾ ಬಣಕ್ಕೆ ಆಯೋಗ ಸೂಚನೆ
ವೆಬ್'ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 'ಎರಡು ಎಲೆ' ಚಿಹ್ನೆ ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಶಶಿಕಲಾ ಬಣಕ್ಕೆ ಚುನಾವಣಾ ಆಯೋಗ ಸೋಮವಾರ ಸೂಚನೆ ನೀಡಿದೆ...

Published On :
ಚೆನ್ನೈ: ವೆಬ್'ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 'ಎರಡು ಎಲೆ' ಚಿಹ್ನೆ ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಶಶಿಕಲಾ ಬಣಕ್ಕೆ ಚುನಾವಣಾ ಆಯೋಗ ಸೋಮವಾರ ಸೂಚನೆ ನೀಡಿದೆ.
ಎಐಎಡಿಎಂಕೆ ನಾಯಕಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣದ ಬಳಿಕ ಪಕ್ಷದ ಚುಕ್ಕಾಣಿ ಹಾಗೂ ಪಕ್ಷದ ಗುರುತು ಕುರಿತಂತೆ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವೆ ತೀವ್ರ ಹಗ್ಗಜಗ್ಗಾಟ ಉಂಟಾಗಿದ್ದು. ನಂತರ ಇಬ್ಬರ ಜಗಳಕ್ಕೆ ಬ್ರೇಕ್ ಹಾಕಿದ್ದ ಚುನಾವಣಾ ಆಯೋಗ ಎಐಎಡಿಎಂಕೆ ಪಕ್ಷದ ಚಿನ್ಹೆಯಾಗಿದ್ದ ಎರಡು ಎಲೆಗಳ ಗುರತನ್ನು ಸ್ಥಗಿತಗೊಳಿಸಿ ಇಬ್ಬರಿಗೂ ಬೇರೆಬೇರೆ ಚಿನ್ಹೆಗಳನ್ನು ನೀಡಿತ್ತು.
ಅಲ್ಲದೆ. ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣಕ್ಕೆ ಎಐಎಡಿಎಂಕೆ ಪುರುಚ್ಚಿ ತಲೈವಿ ಅಮ್ಮಾ ಹಾಗೂ ಜಯಾ ಆಪ್ತೆ ಶಶಿಕಲಾ ಬಣಕ್ಕೆ ಎಐಎಡಿಎಂಕೆ ಅಮ್ಮಾ ಎಂದು ಹೆಸರಿಟ್ಟುಕೊಳ್ಳಲು ಸೂಚಿಸಿತ್ತು.
ಇದೀಗ ಶಶಿಕಲಾ ಬಣದ ನಾಯಕರು ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಎಲೆ ಚಿನ್ಹೆಯನ್ನು ಬಳಸುತ್ತಿರುವ ಹಿನ್ನಲೆಯಲ್ಲಿ, ಖಡಕ್ ಆಗಿ ಸೂಚನೆ ನೀಡಿರುವ ಚುನಾವಣಾ ಆಯೋಗ ಕೂಡಲೇ ಎರಡು ಎಲೆ ಚಿನ್ಹೆ ಬಳಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೆ, ಈ ಹಿಂದಿನ ಸೂಚನೆ ನಡುವೆಯೂ ಎರಡು ಎಲೆ ಚಿಹ್ನೆ ಬಳಸಿದ್ದರ ಕುರಿತಂತೆ ಏಪ್ರಿಲ್ 6 ಬೆಳಿಗ್ಗೆ 11 ಗಂಟೆಯೊಳಗಾಗಿ ಸ್ಪಷ್ಟನೆ ನೀಡುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾಮಾಜಿಕ ಜಾಲತಾಣwebsiteAIADMKElection Commissionಚುನಾವಣಾ ಆಯೋಗSocial Mediaವೆಬ್ ಸೈಟ್ಶಶಿಕಲಾSasikalaTwo leavesಎಐಎಡಿಎಕೆಎರಡು ಎಲೆ ಚಿಹ್ನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


