ಮತ್ತೊಬ್ಬ ಟ್ರೈನಿ ಸಬ್ ಇನ್ಸ್ ಪೆಕ್ಟರ್ ನೇಣಿಗೆ ಶರಣು
ಟ್ರೈನಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ಜಿಲ್ಲೆಯ ಮಿರ್ಯಾಲ್ ಗುಡಾದಲ್ಲಿ ನಡೆದಿದೆ....

ನಲ್ಗೊಂಡ: ಟ್ರೈನಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ಜಿಲ್ಲೆಯ ಮಿರ್ಯಾಲ್ ಗುಡಾದಲ್ಲಿ ನಡೆದಿದೆ.
ಕಿರಣ್ ಎಂಬ 28 ವರ್ಷದ ಟ್ರೈನಿ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಶರಣಾದವರು.
ಕಿರಣ್ 2014 ರ ಬ್ಯಾಚ್ ನಲ್ಲಿ ಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದರು. ತರಬೇತಿ ವೇಳೆ ಗಾಯೊಗಂಡು ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದ ಕಿರಣ್ ಮೂರು ತಿಂಗಳು ರಜೆಯ ಮೇಲೆ ತೆರಳಿದ್ದರು.
ಚೇತರಿಸಿಕೊಂಡ ನಂತರ ಕಿರಣ್ ಮತ್ತೆ ತರಬೇತಿಗಾಗಿ ಆಂದ್ರ ಪ್ರದೇಶ ಪೊಲೀಸ್ ಅಕಾಡೆಮಿಗೆ ಮನವಿ ಮಾಡಿದರು, ಆದರೆ ಕಿರಣ್ ಮನವಿಯನ್ನು ತಳ್ಳಿ ಹಾಕಿದ ಆಂಧ್ರ ಪೊಲೀಸ್ ಅಕಾಡೆಮಿ 2016 ರ ಬ್ಯಾಚ್ ನ ಅಭ್ಯರ್ಥಿಗಳ ಜೊತೆ ಬಂದು ತರಬೇತಿ ಪಡೆದುಕೊಳ್ಳಲು ಸೂಚಿಸಿತು.
ಇದರಿಂದ ತೀವ್ರ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ಕಿರಣ್ ಸಹೋದರ ಅರ್ಜುನ್ ಮಿರ್ಯಾಲಿಗುಡ್ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಣ್ ಸಾವಿಗೆ ಆಂಧ್ರ ಪ್ರದೇಶ ಪೊಲೀಸ್ ಅಕಾಡೆಮಿ ನಿರ್ದೇಶಕ ಇಶಾ ಕುಮಾರ್ ಕಾರಣ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


