ಪ್ರವಾಹದ ವೇಳೆ ಕನ್ನಡಿಗರ ನೆರವು ಮರೆಯದಿರಿ: ತಮಿಳುನಾಡಿಗೆ ನಟಿ ನಗ್ಮಾ
ಪ್ರವಾಹದ ಸಂಕಷ್ಟದಲ್ಲಿ ನರಳುತ್ತಿದ್ದ ವೇಳೆ ಸಹಾಯಕ್ಕೆ ಬಂದ ಕರ್ನಾಟಕ ನೆರವು ಎಂದಿಗೂ ಮರೆಯದಿರಿ ಎಂದು ನಟಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ...

ಚೆನ್ನೈ: ಪ್ರವಾಹದ ಸಂಕಷ್ಟದಲ್ಲಿ ನರಳುತ್ತಿದ್ದ ವೇಳೆ ಸಹಾಯಕ್ಕೆ ಬಂದ ಕರ್ನಾಟಕ ನೆರವು ಎಂದಿಗೂ ಮರೆಯದಿರಿ ಎಂದು ನಟಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಗ್ಮಾ ಅವರು ಹೇಳಿದ್ದಾರೆ.
ಕಾವೇರಿ ವಿವಾದ ಕುರಿತಂತೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಟಿ ನಗ್ಮಾ, ಚೆನ್ನೈನಲ್ಲಿ ಇತ್ತೀಚೆಗಷ್ಟೇ ದೊಡ್ಡ ಪ್ರವಾಹ ಬಂದಿತ್ತು. ಪ್ರವಾಹ ಸಮಸ್ಯೆಗೆ ತಮಿಳುನಾಡಿಗೆ ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು. ಸಂಕಷ್ಟದಲ್ಲಿದ್ದ ಸಮಯದಲ್ಲಿ ಯಾರು ನೆರವಿಗೆ ಬಂದರು ಎಂಬುದನ್ನು ನೆನೆಯಬೇಕಿದೆ. ಸಂಕಷ್ಟದಲ್ಲಿದ್ದ ಜನತೆಗೆ ಕರ್ನಾಟಕ ಸಾಕಷ್ಟು ನೆರವು ನೀಡಿದೆ. ಇದನ್ನು ಎಂದಿರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಕಾವೇರಿ ನೀರಿನ ಸಮಸ್ಯೆ ಎದುರಾಗಿದೆ. ವಿವಾದ ಕುರಿತಂತೆ ಮಾತನಾಡಿದಷ್ಟು ಸುಲಭವಾಗಿ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕದವರು ನಮಗೆ ದ್ರೋಹ ಮಾಡುವುದಿಲ್ಲ. ಸಮಸ್ಯೆಯಿರುವುದರಿಂದ ಅವರು ನೀರು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ಕಾವೇರಿ ನೀರಿಗಿಂತ ದೇಶದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ರೈತರು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಮುಂದೆ ಕಾವೇರಿ ವಿಚಾರ ದೊಡ್ಡ ವಿಚಾರವೇನಲ್ಲ. ಹೀಗಾಗಿ ವಿವಾದ ಕುರಿತಂತೆ ಬಹಳ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


