ದೇಶ

ಫಲದಾಯಕ ಮತ್ತು ಫಲಿತಾಂಶ ಆಧಾರಿತ ಜಿ 20 ಶೃಂಗಸಭೆಯನ್ನು ಎದುರು ನೋಡುತ್ತಿದ್ದೇನೆ: ನರೇಂದ್ರ ಮೋದಿ

ನಾಡಿದ್ದು ಭಾನುವಾರ ಚೀನಾದ ಹಾಂಗ್ ಝೌನಲ್ಲಿ ಫಲದಾಯಕ ಮತ್ತು ಫಲಿತಾಂಶ ಆಧಾರಿತ ಜಿ 20 ಶೃಂಗಸಭೆಯನ್ನು...

ಫಲದಾಯಕ ಮತ್ತು ಫಲಿತಾಂಶ ಆಧಾರಿತ ಜಿ 20 ಶೃಂಗಸಭೆಯನ್ನು ಎದುರು ನೋಡುತ್ತಿದ್ದೇನೆ: ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published On :
ನವದೆಹಲಿ: ನಾಡಿದ್ದು ಭಾನುವಾರ ಚೀನಾದ ಹಾಂಗ್ ಝೌನಲ್ಲಿ ಫಲದಾಯಕ ಮತ್ತು ಫಲಿತಾಂಶ ಆಧಾರಿತ  ಜಿ 20 ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಶ್ವ ನಾಯಕರೊಂದಿಗೆ ಎಲ್ಲಾ ಸವಾಲುಗಳು ಮತ್ತು ಅಂತಾರಾಷ್ಟ್ರೀಯ ಬದ್ಧತೆಗೆ ಒತ್ತು ನೀಡಲು ಭಾರತ ಶೃಂಗಸಭೆಯಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಲಿದೆ ಎಂದು ಹೇಳಿದ್ದಾರೆ.
ಇಂದು ಸಂಜೆ ವಿಯೆಟ್ನಾಂಗೆ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ, ವಿಯೆಟ್ನಾಂ ಜೊತೆಗೆ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದ್ದು, ಎರಡೂ ರಾಷ್ಟ್ರಗಳ ಸಹಭಾಗಿತ್ವ ಏಷ್ಯಾ ಮತ್ತು ಇತರ ದೇಶಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರಧಾನಿ ಅಲ್ಲಿಂದ ನಾಳೆ ಚೀನಾಕ್ಕೆ ತೆರಳಲಿದ್ದಾರೆ.
''ಇಂದು ಸಂಜೆ ನಾನು ವಿಯೆಟ್ನಾಂನ ಹನೊಯ್ ಗೆ ಭೇಟಿ ನೀಡಲಿದ್ದು, ಈ ಭೇಟಿ ತುಂಬಾ ಮುಖ್ಯವಾಗಲಿದೆ. ವಿಯೆಟ್ನಾಂ ಜೊತೆಗೆ ಭಾರತ ತುಂಬಾ ಗಟ್ಟಿಯಾದ ಆರ್ಥಿಕ ಸಂಬಂಧವನ್ನು ಬಯಸುತ್ತದೆ. ಇದರಿಂದ ಎರಡೂ ದೇಶಗಳ ನಾಗರಿಕರಿಗೆ ಸಹಕಾರಿಯಾಗಲಿದೆ. ಎರಡೂ ದೇಶಗಳ ನಾಗರಿಕರ ಮಧ್ಯೆ ಸಂಬಂಧ ಬೆಸೆಯುವುದು ನನ್ನ ಭೇಟಿಯ ಉದ್ದೇಶ'' ಎಂದು ಮೋದಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ವಿಶ್ವ ಆರ್ಥಿಕ ಬೆಳವಣಿಗೆಗೆ ಸಮರ್ಥನೀಯ ಸ್ಥಿರವಾದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವ ರೀತಿ ಮುಖ್ಯವಾಗಿರುತ್ತದೆ. ಅಭಿವೃದ್ಧಿ ಕಾಣುತ್ತಿರುವ ದೇಶಗಳಿಗೆ ಇದು ತುಂಬಾ ಮುಖ್ಯ. ಈ ವಿಷಯಗಳನ್ನು ಜಿ20 ಶೃಂಗಸಭೆಯಲ್ಲಿ ಚರ್ಚೆ ಮಾಡಲಾಗುವುದು. ತಾವು ಫಲದಾಯಕ ಫಲಿತಾಂಶ ಭರಿತ ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಭಾರತ ಭಯೋತ್ಪಾದನೆ ನಿಗ್ರಹ, ತೆರಿಗೆ ಕಡಿತ, ವೆಚ್ಚ ನಿರ್ವಹಣೆ ಮತ್ತು ಪ್ರಮುಖ ಔಷಧಗಳಿಗೆ ಮಾರುಕಟ್ಟೆ ಲಭ್ಯತೆ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.