ದೇಶಕ್ಕೆ ಹಿಂತಿರುಗಲು ಭಾರತದ ಸಹಾಯ ಕೋರುತ್ತಿರುವ ಪಾತಕಿ ದಾವೂದ್
: ಭಾರತ ಮತ್ತು ಪಾಕಿಸ್ತಾನಕ್ಕೆ ತಮ್ಮ ಏಜೆನ್ಸಿಗಳ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಸೆರೆ ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಆದರೆ ಇದರ ...

ನವದೆಹಲಿ: ಭಾರತ ಮತ್ತು ಪಾಕಿಸ್ತಾನಕ್ಕೆ ತಮ್ಮ ಏಜೆನ್ಸಿಗಳ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಸೆರೆ ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಆದರೆ ಇದರ ಬೆನ್ನಲ್ಲೇ, ದಾವೂದ್ ದೇಶಕ್ಕೆ ಹಿಂತಿರುಗಲು ಭಾರತದ ಸಹಾಯ ಕೋರಿದ್ದಾನೆ ಎನ್ನಲಾಗಿದೆ.
ಹಣಕಾಸಿನ ಮುಗ್ಗಟ್ಟು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದಾವೂದ್ ಡಿಸೆಂಬರ್ ಅಂತ್ಯದೊಳಗೆ ಭಾರತಕ್ಕೆ ಬರುವ ಇಚ್ಚೆ ವ್ಯಕ್ತ ಪಡಿಸಿದ್ದು, ಅದಕ್ಕಾಗಿ ಸಹಾಯ ಕೋರಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದಾವೂದ್ ಯಾವುದೇ ಕ್ಷಣದಲ್ಲಾದದರೂ ಸಾವು ಸಂಭವಿಸಬಹುದು ಎಂದು ಅಂಜುತ್ತಿದ್ದಾನೆ. ತನ್ನ ದೇಹದ ಅಂತ್ಯಕ್ರಿಯೆ ತನ್ನ ತವರಲ್ಲೇ ಆಗಬೇಕು ಎಂದು ಬಯಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
2015 ರಿಂದ ದಾವೂದ್ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದು, ಇದರಿಂದ ಪಾತಕಿ ಅಸಮಾಧಾನಗದೊಂಡಿದ್ದಾನೆ. ಒಂದು ವೇಳೆ ದಾವೂದ್ ಜೀವಂತವಾಗಿ ಭಾರತಕ್ಕೆ ಹಿಂತಿರುಗಿದರೇ ಆತ ಇಷ್ಟು ದಿನ ಪಾಕ್ ನಲ್ಲಿ ಭೂಗತವಾಗಿರಲು ಸಹಾಯ ಮಾಡಿದ ಪಾಕಿಸ್ತಾನ ರಾಜಕಾರಣಿಗಳು, ಸೇನೆಯ ಪ್ರಮುಖರ ಹೆಸರನ್ನು ಬಹಿರಂಗ ಪಡಿಸಬಹುದೆಂಬ ಭಯದಲ್ಲಿರುವ ಪಾಕ್ ಆತನ ಸಾವನ್ನೇ ಬಯಸುತ್ತಿದೆ. ಪಾಕಿಸ್ತಾನದಲ್ಲಿ ಹಲವು ಪ್ರಬಾವಿಗಳು ದಾವೂದ್ ನ ಸ್ನೇಹಿತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


