ದೇಶ

ಅಪರೂಪದ ಮದುವೆ! ಶಿವ ದೇವಾಲಯದಲ್ಲಿ ಮುಸ್ಲಿಂ ಮದುವೆ ಇದೇನು ವಿಚಿತ್ರ

ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತಿದ್ದ ಮುಸ್ಲಿಂ ಜೋಡಿಯೊಂದು ಪೋಷಕರು ಹಾಗೂ ಸಮುದಾಯದವರ ವಿರೋಧದಿಂದಾಗಿ ಮನೆ ಬಿಟ್ಟು ಪರಾರಿಯಾಗಿ ಸಂಧಾನದ ಬಳಿಕ ಶಿವ...

ಅಪರೂಪದ ಮದುವೆ! ಶಿವ ದೇವಾಲಯದಲ್ಲಿ ಮುಸ್ಲಿಂ ಮದುವೆ ಇದೇನು ವಿಚಿತ್ರ
ಶಿವ ದೇವಾಲಯದಲ್ಲಿ ಮುಸ್ಲಿಂ ಜೋಡಿ ಮದುವೆ
Published On :
ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತಿದ್ದ ಮುಸ್ಲಿಂ ಜೋಡಿಯೊಂದು ಪೋಷಕರು ಹಾಗೂ ಸಮುದಾಯದವರ ವಿರೋಧದಿಂದಾಗಿ ಮನೆ ಬಿಟ್ಟು ಪರಾರಿಯಾಗಿ ಸಂಧಾನದ ಬಳಿಕ ಶಿವ ದೇವಾಲಯದಲ್ಲಿ ಮದುವೆ ಮಾಡಿಕೊಂಡ ಅಪರೂಪದ ಮದುವೆ ಬಿಹಾರದಲ್ಲಿ ನಡೆದಿದೆ. 
ಬಿಹಾರದ ಸಪೌಲ್ ಜಿಲ್ಲೆಯ ಭೀಮನಗರ ಗ್ರಾಮದ ಶಿವ ದೇವಾಲಯದಲ್ಲಿ ಮೊಹಮ್ಮದ್ ಸೊಹಾನ್, ನೌರೇಖಾ ಖಾತುನ್ ಜೋಡಿಯ ನಿಖಾವನ್ನು ಹಿಂದೂ-ಮುಸ್ಲಿಂ ಸಮುದಾಯದವರೇ ನಿಂತು ಮಾಡಿಸಿದ್ದಾರೆ. 
ಪೋಷಕರ ವಿರೋಧದಿಂದಾಗಿ ಈ ಜೋಡಿ ಕಳೆದ ದಸರಾ ವೇಳೆ ದೆಹಲಿಗೆ ಓಡಿ ಹೋಗಿದ್ದರು. ಬಳಿಕ ಪಂಚಾಯಿತಿ ಚರ್ಚೆಯಲ್ಲಿ ಇಬ್ಬರಿಗೂ ಮದುವೆ ಮಾಡಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಅದರಂತೆ ಮನೆ ಬಿಟ್ಟು ಹೋಗಿದ್ದ ಜೋಡಿಯನ್ನು ಕರೆದು ಸ್ಥಳೀಯ ಶಿವ ದೇವಾಲಯದಲ್ಲಿ ಸರ್ವರ ಸಮಕ್ಷಮದಲ್ಲಿ ವಿವಾಹ ನೆರವೇರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.