ರಾಮ್ ಗೋಪಾಲ್ ಯಾದವ್ ರಿಂದ ಜೀವ ಬೆದರಿಕೆ: ಅಮರ್ ಸಿಂಗ್
ಉತ್ತರ ಪ್ರದೇಶ ಆಡಳಿತರೂಢ ಸಮಾಜವಾದಿ ಪಕ್ಷ(ಎಸ್ ಪಿ)ದಲ್ಲಿನ ಒಳಜಗಳ ಮತ್ತು ಭಿನ್ನಮತದ ಬಗ್ಗೆ ಕಡೆಗೂ...

ನವದೆಹಲಿ: ಉತ್ತರ ಪ್ರದೇಶ ಆಡಳಿತರೂಢ ಸಮಾಜವಾದಿ ಪಕ್ಷ(ಎಸ್ ಪಿ)ದಲ್ಲಿನ ಒಳಜಗಳ ಮತ್ತು ಭಿನ್ನಮತದ ಬಗ್ಗೆ ಕಡೆಗೂ ಮೌನ ಮುರಿದಿರುವ ಅಮರ್ ಸಿಂಗ್ ಅವರು, ಎಸ್ ಪಿ ನಾಯಕ ರಾಮ್ ಗೋಪಾಲ್ ಯಾದವ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.
ಯಾದವ್ ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅಮರ್ ಸಿಂಗ್ ಅವರು, ರಾಮ್ ಗೋಪಾಲ್ ಯಾದವ್ ಅವರಿಂದ ತಮಗೆ ಬೆದರಿಕೆ ಇದ್ದು, ಈ ಸಂಬಂಧ ಗೃಹ ಸಚಿವರೊಂದಿಗೆ ಮಾತನಾಡಿ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇನೆ ಎಂದಿದ್ದಾರೆ.
ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ರಾಮ್ ಗೋಪಾಲ್ ಯಾದವ್ ಅವರ ಬೆದರಿಕೆಯ ಹೇಳಿಕೆಯ ನಂತರ ತಾವು ಆತಂಕಗೊಂಡಿರುವುದಾಗಿ ತಿಳಿಸಿದ್ದಾರೆ.
ಪಕ್ಷದಲ್ಲಿನ ಭಿನ್ನಮತಕ್ಕೆ ಅಮರ್ ಸಿಂಗ್ ಅವರೇ ಕಾರಣ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದರು. ಆದರೆ ಅವರ ಆರೋಪವನ್ನು ತಳ್ಳಿಹಾಕಿದ ಸಿಂಗ್, ಅಖಿಲೇಶ್ ಯಾದವ್ ಅವರು ಡಿಂಪಲ್ ಯಾದವ್ ಜೊತೆ ಮದುವೆಯಾಗುವುದಕ್ಕೆ ಅವರ ಇಡೀ ಕುಟುಂಬ ವಿರೋಧಿಸಿತ್ತು. ಹಾಗ ನಾನೊಬ್ಬನೇ ಅವರ ಬೆಂಬಲಕ್ಕೆ ನಿಂತಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.
ನಾನು ಸಿಎಂ ಅಖಿಲೇಶ್ ಜೊತೆ ಇಲ್ಲ. ಆದರೆ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಜೊತೆ ಸದಾ ಇರುತ್ತೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


