ದೇಶ

ರಾಫೆಲ್ ಡೀಲ್ ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮವಾದ ಒಪ್ಪಂದ: ಕೇಂದ್ರ ಸರ್ಕಾರ

ಭಾರತ ಹಾಗೂ ಫ್ರಾನ್ಸ್ ನಡುವಿನ ರಾಫೆಲ್ ಡೀಲ್ ಒಪ್ಪಂದ ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮವಾದ ಒಪ್ಪಂದ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಫೆಲ್ ಡೀಲ್  ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮವಾದ ಒಪ್ಪಂದ: ಕೇಂದ್ರ ಸರ್ಕಾರ
ರಾಫೆಲ್ ಜೆಟ್
Published On :

ನವದೆಹಲಿ: ಭಾರತ ಹಾಗೂ ಫ್ರಾನ್ಸ್ ನಡುವಿನ ರಾಫೆಲ್ ಡೀಲ್ ಒಪ್ಪಂದ ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮವಾದ ಒಪ್ಪಂದ ಎಂದು ಕೇಂದ್ರ ಸರ್ಕಾರ ಹೇಳಿದೆ.
ರಾಫೆಲ್ ಜೆಟ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ದುಪ್ಪಟ್ಟು ಹಣ ವ್ಯಯಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ರಾಫೆಲ್ ಜೆಟ್ ಒಪ್ಪಂದ ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮ ಒಪ್ಪಂದಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಭಾರತ ರಾಫೆಲ್ ಜೆಟ್ ಖರೀದಿಗೆ ದುಪ್ಪಟ್ಟು ಹಣ ವ್ಯಯಿಸುತ್ತಿದೆ ಎಂಬ ಸ್ವರಾಜ್ ಅಭಿಯಾನ್ ಪಕ್ಷದ  ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾರತ ಸಹಿ ಹಾಕಿರುವ ಅತ್ಯುತ್ತಮ ಒಪ್ಪಂದಗಳಲ್ಲಿ ರಾಫೆಲ್ ಜೆಟ್ ಒಪ್ಪಂದವು ಒಂದು, ಫ್ರಾನ್ಸ್ ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶಕ್ಕೂ ಇಂತಹ ಒಳ್ಳೆಯ ಒಪ್ಪಂದವನ್ನು ನೀಡಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.