ದೇಶ

1999 ರ ಯುದ್ಧದಲ್ಲಿ ಎಲ್ಒಸಿ ದಾಟದಂತೆ ಸೇನೆಗೆ ಅಟಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು: ಜನರಲ್ ವಿಪಿ ಮಲಿಕ್

ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಸೇನೆಗೆ ಗಡಿ ನಿಯಂತ್ರಣ ರೇಖೆ ದಾಟದಂತೆ ಸೂಚನೆ ನೀಡಿದ್ದರು ಎಂದು ಸೇನಾಧಿಕಾಗಿ ವಿಪಿ ಮಲಿಕ್ ಹೇಳಿದ್ದಾರೆ.

1999 ರ ಯುದ್ಧದಲ್ಲಿ ಎಲ್ಒಸಿ ದಾಟದಂತೆ ಸೇನೆಗೆ ಅಟಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು: ಜನರಲ್ ವಿಪಿ ಮಲಿಕ್
ಅಟಲ್ ಬಿಹಾರಿ ವಾಜಪೇಯಿ
Published On :

ಅಹಮದಾಬಾದ್: 1999 ರಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆದಿದ್ದ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಸೇನೆಗೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ನುಗ್ಗಿ ದಾಳಿ ನಡೆಸುವ ಅವಕಾಶ ಇತ್ತು. ಆದರೆ ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಸೇನೆಗೆ ಗಡಿ ನಿಯಂತ್ರಣ ರೇಖೆ ದಾಟದಂತೆ ಸೂಚನೆ ನೀಡಿದ್ದರು ಎಂದು ಸೇನಾಧಿಕಾಗಿ ವಿಪಿ ಮಲಿಕ್  ಹೇಳಿದ್ದಾರೆ.

ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಸ್ವಿಚ್ ಗ್ಲೋಬಲ್ ಎಕ್ಸ್ಪೋ ದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಸೇನಾ ಜನರಲ್ ವಿಪಿ ಮಲಿಕ್, ಗಡಿ ನಿಯಂತ್ರಣ ರೇಖೆ ದಾಟಿ ಸೀಮಿತ ದಾಳಿ ನಡೆಸಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೆ ವೇಳೆಯಲ್ಲಿ 1999 ರ ಕಾರ್ಗಿಲ್ ಯುದ್ಧವನ್ನು ಸ್ಮರಿಸಿದ ನಿವೃತ್ತ ಸೇನಾ ಜನರಲ್ ಮಲಿಕ್, 1999 ರ ಜೂ.2 ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಸೇನೆಗೆ ಗಡಿ ನಿಯಂತ್ರಣ ರೇಖೆ ದಾಟದಂತೆ ಸೂಚನೆ ನೀಡಿದ್ದರು. "ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರ, " ಎಲ್ ಒಸಿ ದಾಟದಂತೆ ಆದೇಶ ನೀಡಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿದ್ದನ್ನು ವಿ ಪಿ ಮಲಿಕ್ ನೆನಪಿಸಿಕೊಂಡಿದ್ದಾರೆ.

ದಿನದಲ್ಲಿ ಮೂರು ಸಭೆಗಳು ನಡೆದ ಬಳಿಕ ಪಾಕ್ ಸೇನೆಯನ್ನು ಬಿಟ್ಟುಬಿಡುವಂತೆ ಸೂಚಿಸಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೂಚನೆಯನ್ನು ಒಪ್ಪಿದೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ನಿರ್ಧಾರದಿಂದ ಬಹಳ ಬೇಸರವಾಗಿತ್ತು ಎಂದು ಮಲಿಕ್ ಹೇಳಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ಸೀಮಿತ ದಾಳಿಯ ಬಗ್ಗೆಯೂ ಮಾತನಾಡಿರುವ ಮಲಿಕ್, ಸೀಮಿತ ದಾಳಿ ನಡೆಸಿದ್ದಕ್ಕಾಗಿ ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿಲ್ಲ. ಪಾಕಿಸ್ತಾನ ತನ್ನ ಮೊಂಡುತನವನ್ನು ಹೀಗೆಯೇ ಮುಂದುವರೆಸಿದರೆ ಯುದ್ಧ ಅನಿವಾರ್ಯ ಎಂಬುದನ್ನು ಮಾತ್ರ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದು ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.