ದೇಶ

ಗರ್ಭಪಾತ ಮಾಡಿಸಲೊಪ್ಪದ ಮ್ಯಾಜಿಸ್ಟ್ರೇಟ್ ಪತ್ನಿಯನ್ನು ಕೊಂದ ವಕೀಲ

ಗರ್ಭಪಾತ ಮಾಡಿಸಲು ನಿರಾಕರಿಸಿದ ತನ್ನ ಪತ್ನಿಯನ್ನೇ ವಕೀಲ ಪತಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್...

ಗರ್ಭಪಾತ ಮಾಡಿಸಲೊಪ್ಪದ ಮ್ಯಾಜಿಸ್ಟ್ರೇಟ್ ಪತ್ನಿಯನ್ನು ಕೊಂದ ವಕೀಲ
ಸಾಂದರ್ಭಿಕ ಚಿತ್ರ
Published On :

ಕಾನ್ಪುರ:  ಗರ್ಭಪಾತ ಮಾಡಿಸಲು ನಿರಾಕರಿಸಿದ ತನ್ನ ಪತ್ನಿಯನ್ನೇ ವಕೀಲ ಪತಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ನಡೆದಿದೆ.

ಕೊಲೆಯಾದ ಮಹಿಳಾ ನ್ಯಾಯಾಧೀಶೆ ಪ್ರತಿಭಾ ಗೌತಮ್‌ರ‌್ ನ್ನು ಅವರ ಪತಿ ಮನು ಅಭಿಷೇಕ್ ಕೊಲೆ ಮಾಡಿದ್ದಾನೆ. ಮೃತ ಪ್ರತಿಭಾ ಕಾನ್ಪುರ್ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೆಟ್ ಆಗಿದ್ದರು.

ಆರೋಪಿ ಮನು ದೆಹಲಿ ಹೈಕೋರ್ಟ್‌ನಲ್ಲಿ ವಕೀಲ. ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ನ್ಯಾ. ಪ್ರತಿಭಾ ಮೃತದೇಹ ಪತ್ತೆಯಾಗಿತ್ತು. ನ್ಯಾ.ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನು ಪೊಲೀಸರಿಗೆ ದೂರು ನೀಡಿದ್ದ.

ಆದರೆ ಪ್ರತಿಭಾ ಪೋಷಕರು ಅಳಿಯನ ಮೇಲೆ ಸಂದೇಹ ವ್ಯಕ್ತ ಪಡಿಸಿ ಕೇಸು ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ನ್ಯಾ. ಪ್ರತಿಭಾರ ಮೃತದೇಹದ ಮೇಲೆ 20 ಗಾಯಗಳು ಪತ್ತೆಯಾಗಿವೆ. ಪ್ರತಿಭಾ ಮೂರುವರೆ ತಿಂಗಳ ಗರ್ಭಿಣಿಯಾಗಿದ್ದರು. ಜೊತೆಗೆ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಯಿತು. ನಂತರ ಆರೋಪಿ ವಕೀಲನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.