ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಅವರ ಚಿನ್ನಾಭರಣ ಕಳವು;ಮನೆಗೆಲಸದವರನ್ನು ತನಿಖೆ ನಡೆಸುತ್ತಿರುವ ಪೊಲೀಸರು
ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಅವರ ಮುಂಬೈಯ ಬಾಂದ್ರಾದಲ್ಲಿರುವ ಮನೆಯಿಂದ...

Published On :
ಮುಂಬೈ: ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಅವರ ಮುಂಬೈಯ ಬಾಂದ್ರಾದಲ್ಲಿರುವ ಮನೆಯಿಂದ ಸುಮಾರು 80 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಕಳವಾಗಿದ್ದು ಈ ಸಂಬಂಧ ಖಾರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.
ಕಿರಣ್ ರಾವ್ ಅವರ ಸಂಬಂಧಿಕರು ದೂರು ದಾಖಲಿಸಿದ್ದು, ಸೆಕ್ಷನ್ 453ರಡಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಕಳೆದ ವಾರ ತಮ್ಮ ಬೆಡ್ ರೂಂನ ತಿಜೋರಿಯಿಂದ ಉಂಗುರ ಮತ್ತು ವಜ್ರದ ನೆಕ್ಲೆಸ್ ಕಾಣೆಯಾಗಿರುವುದು ಕಿರಣ್ ರಾವ್ ಗಮನಕ್ಕೆ ಬಂದಿತ್ತು. ಆಗ ಕಿರಣ್ ರಾವ್ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದು ಮಾಧ್ಯಮದವರು ಸಂಪರ್ಕಿಸಿದರೆ ಕಿರಣ್ ರಾವ್ ಸಿಗಲಿಲ್ಲ. ಖಾರ್ ಪೊಲೀಸ್ ಠಾಣೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಮನೆ ಕೆಲಸದವರ ಮೇಲೆ ಶಂಕೆ: ಈ ಪ್ರಕರಣ ಹಿಂದೆ ಮನೆಕೆಲಸದವರನ್ನು ಆರೋಪಿಗಳೆಂದು ಶಂಕಿಸಲಾಗಿದ್ದು, ಮೂವರನ್ನು ಕಳೆದ 5 ದಿನಗಳಿಂದ ಪೊಲೀಸರು ದಿನಪೂರ್ತಿ ವಿಚಾರಣೆ ನಡೆಸುತ್ತಿದ್ದಾರೆ. ಅವರ ಮನೆಗಳಲ್ಲಿ ಆಭರಣ ಇಟ್ಟಿರಬಹುದೇ ಎಂದು ಕೂಡ ಹುಡುಕಿದ್ದಾರೆ. ಆದರೆ ಇದುವರೆಗೆ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


