ದೇಶ

ಚಿಲ್ಲರೆಗೆ ಆದ್ಯತೆ: ಕಳ್ಳರಿಗೂ ಬೇಡವಾಯ್ತು 500, 1000 ರೂ ನೋಟಿನ ಬಂಡಲ್!

ನೋಟುಗಳ ಮೇಲಿನ ನಿಷೇಧ ಕಳ್ಳರಿಗೂ ಸಮಸ್ಯೆ ಉಂಟು ಮಾಡಿದೆ. ಮೊದಲೆಲ್ಲಾ ಸಿಕ್ಕ ಸಿಕ್ಕದ್ದೆಲ್ಲಾ ಕದಿಯುತ್ತಿದ್ದ ಕಳ್ಳರು ಈಗ ಕೇವಲ ಚಿಲ್ಲರೆ ಹಣಕ್ಕೆ...

ಚಿಲ್ಲರೆಗೆ ಆದ್ಯತೆ: ಕಳ್ಳರಿಗೂ ಬೇಡವಾಯ್ತು 500, 1000 ರೂ ನೋಟಿನ ಬಂಡಲ್!
ಸಾಂದರ್ಭಿಕ ಚಿತ್ರ
Published On :

ಮುಂಬಯಿ: ನೋಟುಗಳ ಮೇಲಿನ ನಿಷೇಧ ಕಳ್ಳರಿಗೂ ಸಮಸ್ಯೆ ಉಂಟು ಮಾಡಿದೆ.  ಮೊದಲೆಲ್ಲಾ ಸಿಕ್ಕ ಸಿಕ್ಕದ್ದೆಲ್ಲಾ ಕದಿಯುತ್ತಿದ್ದ ಕಳ್ಳರು ಈಗ ಕೇವಲ ಚಿಲ್ಲರೆ ಹಣಕ್ಕೆ ಮಾತ್ರ ಆಸೆ ಪಡುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದಲ್ಲಿ ನಡೆದಿರುವ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು 500 ಹಾಗೂ 1000 ರು ನೋಟುಗಳ ಬಂಡಲ್ ಮುಟ್ಟದೇ ಕೇವಲ 100, 50, ಹಾಗೂ 10 ರು  ನೋಟುಗಳನ್ನು ಕದ್ದಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಮತ್ತು ಧುಳೆ ಜಿಲ್ಲೆಗಳಲ್ಲಿ ಮನೆ ಗಳ್ಳತನ ನಡೆದಿದೆ, ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿರುವ ದಿಲಿಪ್ ರೋಕ್ಡೆ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರು  500 ರು ಹಾಗೂ 1.000 ರು ನೋಟಿನ ಬಂಡಲ್ ಗಳನ್ನು ಅಲ್ಲಿಯೇ ಬಿಟ್ಟು ಚಿಲ್ಲರೆ ಹಣ ಕಳ್ಳತನ ಮಾಡಿದ್ದಾರೆ.

ಎರಡು ದಿನಗಳ  ಹಿಂದೆ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಚಿಲ್ಲರೆ ಹಣದ ಜೊತೆಗೆ ಎರಡು ಎಲ್ ಪಿಜಿ ಸಿಲಿಂಡರ್ ಗಳನ್ನ ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬಾಗಿಲು ಮುರಿದು ಮನೆ ಕಳ್ಳತನ ಮಾಡಿರುವ ಕಳ್ಳರು ಕೇವಲ ಚಿಲ್ಲರೆ ಹಣ ಮಾತ್ರ ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.