50 ಮತ್ತು 100 ರು.ನೋಟುಗಳ ನಿಷೇಧವಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ
500 ಮತ್ತು 1000ರು. ಮುಖಬೆಲೆಯ ನೋಟುಗಳು ನಿಷೇಧವಾದ ಬೆನ್ನಲ್ಲೇ 50 ಮತ್ತು 100ರು ಮುಖಬೆಲೆಯ ನೋಟುಗಳು ಕೂಡ ನಿಷೇಧವಾಗಲಿವೆ ಎಂಬ ಊಹಾಪೋಹವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದೆ.

ನವದೆಹಲಿ: 500 ಮತ್ತು 1000ರು. ಮುಖಬೆಲೆಯ ನೋಟುಗಳು ನಿಷೇಧವಾದ ಬೆನ್ನಲ್ಲೇ 50 ಮತ್ತು 100ರು ಮುಖಬೆಲೆಯ ನೋಟುಗಳು ಕೂಡ ನಿಷೇಧವಾಗಲಿವೆ ಎಂಬ ಊಹಾಪೋಹವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದೆ.
ಬುಧವಾರ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ ಪ್ರಸ್ತುತ 50 ಮತ್ತು 100 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾವವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಂತೆಯೇ ಲಾಕರ್ ಸೀಜ್ ಅಥವಾ ಚಿನ್ನಾಭರಣಗಳ ವಶದ ಕುರಿತೂ ಕೂಡ ಸರ್ಕಾರ ನಿರ್ಧರಿಸಿಲ್ಲ ಎಂದು ಹೇಳಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಈ ಪೈಕಿ ಕಪ್ಪುಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ರು. ನೋಟುಗಳ ನಿಷೇಧದ ಮಾದರಿಯಲ್ಲೇ 50 ಮತ್ತು 100 ರು.ನೋಟುಗಳನ್ನು ನಿಷೇಧಿಸುತ್ತದೆ. ಅಂತೆಯೇ ಅಕ್ರಮ ಹಣ ಮತ್ತು ಆಭರಣಗಳನ್ನು ಹೊಂದಿರುವ ಬ್ಯಾಂಕ್ ಲಾಕರ್ ಗಳು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಿದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಹಿನ್ನಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಹೊಸ ನೋಟಿನ ಭದ್ರತೆ ಕುರಿತು ಚಿಂತೆ ಬೇಡ: ಕೇಂದ್ರದ ಅಭಯ
ಇದೇ ವೇಳೆ ಹೊಸ 2000 ರು.ಮುಖಬೆಲೆಯ ನೋಟುಗಳ ಕುರಿತು ಎದ್ದಿರುವ ಅಪಸ್ವರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಹೊಸ ನೋಟುಗಳ ಭದ್ರತೆ ಕುರಿತು ಯಾವುದೇ ಶಂಕೆ ಬೇಡ. ಅಗತ್ಯ ಮುಂಜಾಗ್ರತೆಗಳನ್ನು ಕೈಗೊಂಡೇ ನೋಟು ಮುದ್ರಿಸಲಾಗಿದೆ. ಹೀಗಾಗಿ ನೋಟಿನ ಗುಣಮಟ್ಟದ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಅಂತೆಯೇ ನೋಟಿನ ಬಣ್ಣದ ಕುರಿತು ಮಾತನಾಡಿರುವ ಸರ್ಕಾರ ನೋಟನ್ನು ನೀರಲ್ಲಿ ಅದ್ದಿ ಬಟ್ಟೆಯಲ್ಲಿ ಒರೆಸಿದರೆ ಬಟ್ಟೆಗೆ ಬಣ್ಣವಾಗುತ್ತದೆಯೇ ಹೊರತು ನೋಟಿನ ಮೇಲೆ ಯಾವುದೇ ಪರಿಣಾಮ ಬೀರದು. ಇದು ನೋಟಿನಲ್ಲಿ ಬಳಕೆ ಮಾಡಲಾಗಿರುವ ಬಣ್ಣದ ಗುಣವಷ್ಟೇ ಎಂದು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


