ಹಳೇ ನೋಟು ವಿನಿಮಯಕ್ಕೆ ಗ್ರಾಹಕರು ಗುರುತುಪತ್ರದ ಫೋಟೋ ಕಾಪಿ ಕೊಡಬೇಕಿಲ್ಲ: ಆರ್‌ಬಿಐ
ಬ್ಯಾಂಕುಗಳಲ್ಲಿ ನಿಷೇಧಿತ 500-1000 ನೋಟುಗಳ ವಿನಿಮಯಿಸಿಕೊಳ್ಳುವಾಗ ಗ್ರಾಹಕರು ತಮ್ಮ ಗುರುತು ಪತ್ರದ ಫೋಟೋ ಕಾಪಿ ನೀಡಬೇಕಾಗಿಲ್ಲ ಎಂದು ರಾಷ್ಟ್ರೀಯ...

Published On :
ನವದೆಹಲಿ: ಬ್ಯಾಂಕುಗಳಲ್ಲಿ ನಿಷೇಧಿತ 500-1000 ನೋಟುಗಳ ವಿನಿಮಯಿಸಿಕೊಳ್ಳುವಾಗ ಗ್ರಾಹಕರು ತಮ್ಮ ಗುರುತು ಪತ್ರದ ಫೋಟೋ ಕಾಪಿ ನೀಡಬೇಕಾಗಿಲ್ಲ ಎಂದು ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಹಳೇ ನೋಟುಗಳ ವಿನಿಮಯ ಮಾಡುವಾಗ ಗ್ರಾಹಕರಿಂದ ಬ್ಯಾಂಕ್ ಶಾಖೆಗಳು ಅವರ ಗುರುತು ಪತ್ರದ ಫೋಟೋ ಕಾಪಿಯನ್ನು ಕಡ್ಡಾಯವಾಗಿ ಕೇಳಿರುವುದು ವರದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರ್ಬಿಐ ತಮ್ಮ ಗುರುತು ಪತ್ರವನ್ನು ತೋರಿಸಿದರಷ್ಟೇ ಸಾಕು ಎಂದು ಹೇಳಿದೆ.
ಬ್ಯಾಂಕಿಗೆ ಬೇಕಿರುವುದು ನೋಟು ವಿನಿಮಯ ಮಾಡಿಕೊಳ್ಳುವ ಗ್ರಾಹಕರ ಗುರುತು ಪತ್ರದಲ್ಲಿನ ನಂಬರ್ ಮಾತ್ರ ಎಂದು ಎಸ್ಬಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರಾಹಕರ ಗುರುತು ಪತ್ರದ ಫೋಟೋ ಕಾಪಿಗಳನ್ನು ಹಲವು ಬ್ಯಾಂಕ್ ಗಳು ಕಡ್ಡಾಯ ಮಾಡಿರುವುದರಿಂದಲೇ ಬ್ಯಾಂಕ್ ಗಳ ಮುಂದೆ ಕ್ಯೂ ಬೆಳೆಯಲು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
exchangeವಿನಿಮಯReserve Bank of IndiaID copieold currency notesಐಡಿ ಕಾಪಿಹಳೇ ನೋಟು ವಿನಿಮಯರಾಷ್ಟ್ರೀಯ ರಿಸರ್ವ್ ಬ್ಯಾಂಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


