ನೋಟುಗಳ ರದ್ದತಿಯಿಂದ ಆರ್ಥಿಕ ಅರಾಜಕತೆ: ಶಿವಸೇನೆ
ಅಕ್ರಮ ಹಣವನ್ನು ಬಯಲಿಗೆಳೆಯಲು ತಮಗೆ ಸಹಕರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನವಿಯನ್ನು ಬೆಂಬಲಿಸದ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಕೇಂದ್ರ ಸರ್ಕಾರದ ನೋಟುಗಳ ರದ್ದತಿಯ ಕ್ರಮದಿಂದ ಆರ್ಥಿಕ ಅರಾಜಕತೆ ಉಂಟಾಗಿದೆ ಎಂದು ಹೇಳಿದೆ.

Published On :
ಮುಂಬೈ: ಅಕ್ರಮ ಹಣವನ್ನು ಬಯಲಿಗೆಳೆಯಲು ತಮಗೆ ಸಹಕರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನವಿಯನ್ನು ಬೆಂಬಲಿಸದ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಕೇಂದ್ರ ಸರ್ಕಾರದ ನೋಟುಗಳ ರದ್ದತಿಯ ಕ್ರಮದಿಂದ ಆರ್ಥಿಕ ಅರಾಜಕತೆ ಉಂಟಾಗಿದೆ ಎಂದು ಹೇಳಿದೆ.
ನೋಟುಗಳ ರದ್ದತಿಯನ್ನು ವ್ಯವಸ್ಥಿತವಾಗಿ ಜಾರಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ, ಮೋದಿ ಅವರ ನಡೆ ಕಪ್ಪುಹಣ ಹೊಂದಿರದ ಸಾಮಾನ್ಯ ಜನರರಿಗೂ ಘಾಸಿ ಉಂಟುಮಾಡಿದೆ, ಕಪ್ಪುಹಣ ಹೊಂದಿರುವ ಕೆಲವು ವ್ಯಕ್ತಿಗಳು ಅದನ್ನು ಸುರಕ್ಷಿತವಾಗಿ ವಿದೇಶಿ ಬ್ಯಾಂಕ್ ಗಳಲ್ಲಿ ಇರಿಸಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದಿದೆ.
ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಶಿವಸೇನೆ, ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಮಾಡುವುದನ್ನು ಬಿಟ್ಟು ಭಾರತೀಯ ನಾಗರಿಕರ ವಿರುದ್ಧವೇ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮದಿಂದ 125 ಕೋಟಿ ಜನರು ಆಹಾರ ನೀರು ಇಲ್ಲದೇ ಕ್ಯೂನಲ್ಲಿ ನಿಲ್ಲಬೇಕಾಗಿ ಬಂದಿದೆ, ಇಷ್ಟೆಲ್ಲಾ ಆದರೂ ಜನರು ನಿಮ್ಮನ್ನು ಮುಂದಿನ ದಿನಗಳಲ್ಲೂ ಬೆಂಬಲಿಸಬೇಕು ಎನ್ನುತ್ತೀರಾ? ಎಂದು ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


