ಚಿಕಿತ್ಸೆಗೆಂದು ಭಾರತಕ್ಕೆ ಬಂದ ಬಾಂಗ್ಲಾದೇಶಿಗರಿಗೆ ತಟ್ಟಿತು ನೋಟ್ ಬಂದ್ ಬಿಸಿ
ಭಾರತದಲ್ಲಿ ಚಿಕಿತ್ಸೆ ಪಡೆಯಲು ಭಾರತಕ್ಕೆ ಆಗಮಿಸಿದ್ದ ನೂರಾರು ಬಾಂಗ್ಲಾದೇಶಿ ನಾಗರಿಕರಿಗೆ 500, 1000 ರೂ ನೋಟುಗಳ ರದ್ದತಿ ಬಿಸಿ ತಟ್ಟಿದೆ.

Published On :
ಭಾರತದಲ್ಲಿ ಚಿಕಿತ್ಸೆ ಪಡೆಯಲು ಭಾರತಕ್ಕೆ ಆಗಮಿಸಿದ್ದ ನೂರಾರು ಬಾಂಗ್ಲಾದೇಶಿ ನಾಗರಿಕರಿಗೆ 500, 1000 ರೂ ನೋಟುಗಳ ರದ್ದತಿ ಬಿಸಿ ತಟ್ಟಿದೆ.
ಬಾಂಗ್ಲಾದೇಶದಿಂದ ಬಂದು ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ನಾಗರಿಕರು ಹಾಗೂ ಚಿಕಿತ್ಸೆ ಪಡೆಯಲು ಭಾರತಕ್ಕೆ ಬಂದಿರುವವರು ಬಾಂಗ್ಲಾ ಕರೆನ್ಸಿಯನ್ನು ಭಾರತದ ಕರೆನ್ಸಿಗೆ ಬದಲಾಯಿಸಿಕೊಳ್ಳುವ ವೇಳೆ ಗರಿಷ್ಟ ಮುಖಬೆಲೆಯ 500, 1000 ರೂ ನೋಟುಗಳ ಪಡೆದುಕೊಂಡಿದ್ದಾರೆ, ಆದರೆ ಚಿಕಿತ್ಸೆಗಾಗಿ ಬಂದವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮದ ಬಿಸಿ ತಟ್ಟಿದೆ.
ರೋಗಿಗಳನ್ನು ದಾಖಲಿಸಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ 500, 1000 ರೂಗಳ ನೋಟುಗಳನ್ನು ಸ್ವೀಕರಿಸಲಾಗುತ್ತಿಲ್ಲ ಎಂದು ಕೋಲ್ಕತಾಗೆ ಬಂದಿರುವ ಬಾಂಗ್ಲಾದೇಶ ಜನರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಕೇವಲ 100 ರೂಪಾಯಿಗಳನ್ನು ಪಡೆಯಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಬಳಿ ಇರುವುದು ಕೆಲವೇ ಕೆಲವು 100 ರ ನೋಟುಗಳು ಎಂದು ಆಸ್ಪತ್ರೆಗೆ ದಾಖಲಾಗಿರುವವರ ಸಂಬಂಧಿಕರೊಬ್ಬರು ಹೇಳಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯೊಬ್ಬರು ಕಿಮೋಥೆರೆಪಿಗೆ ಒಳಗಾಗಬೇಕಿದ್ದು, ಆಸ್ಪತ್ರೆಗಳಲ್ಲಿ 500, 1000 ರೂ ನೋಟುಗಳನ್ನು ಸ್ವೀಕರಿಸಲಾಗುತ್ತಿಲ್ಲ. 100 ರೂ ನೋಟುಗಳನ್ನೇ ನೀಡಬೇಕೆಂದರೆ ನಾನು ಚಿಕಿತ್ಸೆ ಪಡೆಯದೇ ವಾಪಸ್ ತೆರಳಬೇಕಾಗುತ್ತದೆ ಎಂದು ಚಿಕಿತ್ಸೆಪಡೆಯುತ್ತಿರುವವರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತಬಾಂಗ್ಲಾದೇಶರದ್ದತಿmedical treatmentBangladeshi citizens500Rs 500 and Rs 11000 ರೂ ನೋಟು000 demonetization
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


