ವಿದೇಶಿ ಪ್ರವಾಸ ಬಿಟ್ಟು ಒಮ್ಮೆ ನಮ್ಮ ಹಳ್ಳಿಗೆ ಭೇಟಿ ಕೊಡಿ: ಪ್ರಧಾನಿ ಮೋದಿಗೆ 10 ವರ್ಷದ ಬಾಲಕ ಪತ್ರ
ವಿದೇಶಿ ಪ್ರವಾಸ ಬಿಟ್ಟು ನಮ್ಮ ಹಳ್ಳಿಗೆ ಭೇಟಿ ನೀಡಿ ಎಂದು ಬುಡಕಟ್ಟು ಜನಾಂಗದ 10 ವರ್ಷದ ಬಾಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ....

Published On :
ಮಾಲ್ಕನ್ಗಿರಿ(ಒಡಿಶಾ): ವಿದೇಶಿ ಪ್ರವಾಸ ಬಿಟ್ಟು ನಮ್ಮ ಹಳ್ಳಿಗೆ ಭೇಟಿ ನೀಡಿ ಎಂದು ಬುಡಕಟ್ಟು ಜನಾಂಗದ 10 ವರ್ಷದ ಬಾಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.
ಜಪಾನಿನ ಜ್ವರ ನಮ್ಮ ಹಳ್ಳಿಗಳಿಗೆ ಬಡಿದಿದ್ದು ಇದುವರೆಗೂ 73 ಮಕ್ಕಳು ಇದರಿಂದ ಮೃತಪಟ್ಟಿದ್ದು ನಮ್ಮ ಹಳ್ಳಿಗೆ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಪರಿಹರಿಸಿ ಎಂದು ಮನವಿ ಮಾಡಿದ್ದಾನೆ.
ನಮ್ಮ ಜೀವವನ್ನು ಕಾಪಾಡಿ, ಜಪಾನ್ ಜ್ವರದಿಂದ ನನ್ನ ಹಲವು ಸ್ನೇಹಿತರು ಮೃತಪಟ್ಟಿದ್ದಾರೆ. ನೀವು ವಿದೇಶವನ್ನು ಸುತ್ತುತ್ತಿರ ಒಂದು ಬಾರಿ ನಮ್ಮ ಹಳ್ಳಿಗೆ ಭೇಟಿ ನೀಡಿ ಮಕ್ಕಳು ಹೇಗೆ ಸಾಯುತ್ತಿದ್ದಾರೆ ಎಂದು ನೋಡಿ ಎಂದು ಶಿಕಪಲಿ ಗ್ರಾಮ ಪಂಚಾಯಿತಿಯ ಪೊಲ್ಕಂಡಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 10 ವರ್ಷದ ಬಾಲಕ ಮದಿ ಪತ್ರದಲ್ಲಿ ಬರೆದಿದ್ದಾನೆ.
ಮಲ್ಕನ್ಗಿರಿ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಉದಯ್ ಶಂಕರ್ ಮಿಶ್ರಾ ಅವರು ಈ ಸಂಬಂಧ ಮಾಹಿತಿ ನೀಡಿದ್ದು, ಇಲ್ಲಿಯವರೆಗೂ 27 ಮಕ್ಕಳು ಜಪಾನ್ ಜ್ವರದಿಂದ ಸಾವನ್ನಪ್ಪಿದ್ದು, ಇನ್ನಿತರ ಕಾರಣಗಳಿಂದ ಉಳಿದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


