ದೇಶ

6 ಭಾಷೆಗಳಲ್ಲಿ ಪಿಎಂ ಕಚೇರಿ ವೆಬ್ ಸೈಟ್: ಸುಷ್ಮಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಭಾರತದ ಪ್ರಧಾನಮಂತ್ರಿ ಕಚೇರಿ ವೆಬ್ ಸೈಟ್ ನ್ನು 6 ಭಾಷೆಗಳಲ್ಲಿ ಬಿಡುಗಡೆ ಮಾಡಿರುವುದಕ್ಕಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ...

6 ಭಾಷೆಗಳಲ್ಲಿ ಪಿಎಂ ಕಚೇರಿ ವೆಬ್ ಸೈಟ್: ಸುಷ್ಮಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
6 ಭಾಷೆಗಳಲ್ಲಿ ಪಿಎಂ ಕಚೇರಿ ವೆಬ್ ಸೈಟ್: ಸುಷ್ಮಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
Published On :

ನವದೆಹಲಿ: ಭಾರತದ ಪ್ರಧಾನಮಂತ್ರಿ ಕಚೇರಿ ವೆಬ್ ಸೈಟ್ ನ್ನು 6 ಭಾಷೆಗಳಲ್ಲಿ ಬಿಡುಗಡೆ ಮಾಡಿರುವುದಕ್ಕಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಧನ್ಯವಾಗ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 6 ಭಾಷೆಗಳಲ್ಲಿ ಪ್ರಧಾನಮಂತ್ರಿ ಕಚೇರಿಯ ವೆಬ್ ಸೈಟನ್ನು ಬಿಡುಗಡೆ ಮಾಡಿರುವುದಕ್ಕೆ ಸುಷ್ಮಾ ಸ್ವರಾಜ್ ಜೀ ಅವರಿಗೆ ಧನ್ಯವಾದಗಳು. ಈ ಸೈಟ್ ಗಳು ಜನರೊಂದಿಗೆ ನಾನು ನಡೆಸುವ ಮಾತುಕತೆಯನ್ನು ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಇದೇ ವೇಳೆ ವಿವಿಧ ಭಾಷೆಗಳಲ್ಲಿ ವೆಬ್ ಸೈಟ್ ಗಳನ್ನು ತಯಾರು ಮಾಡಲು ಕೆಲಸ ಮಾಡಿದ ಅಧಿಕಾರಿಗಳಿಗೂ ಮೋದಿಯವರು ಧನ್ಯವಾದ ಹೇಳಿದ್ದಾರೆ.

6 ಭಾಷೆಗಳಲ್ಲಿರುವ ಸೈಟ್ ಗಳಲ್ಲಿ ಯಾವುದೇ ಭಾಷೆಯ ಸೈಟ್ ನಲ್ಲಿ ಯಾವುದೇ ತಪ್ಪುಗಳು ಕಂಡು ಬಂದರೆ ಅದನ್ನು ಸರಿಪಡಿಸಲಾಗುತ್ತದೆ. ತಪ್ಪುಗಳನ್ನು ಜನರೇ ನಮ್ಮ ಗಮನಕ್ಕೆ ತರಬೇಕು. ನಿಮ್ಮ ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತೇವೆಂದು ಎಂದು ಹೇಳಿದ್ದಾರೆ.

ವೆಬ್ ಸೈಟ್ ಮತ್ತಷ್ಟು ಜನರನ್ನು ತಲುಪಲಿದೆ. ಅನುಕೂಲಕ್ಕಾಗಿ ಭಾಷೆಗೆ ಆಧರಿಸಿ ಜನರನ್ನು ಸಂಪರ್ಕಿಸುವುದು ನಮ್ಮ ಸರ್ಕಾರ ಉದ್ದೇಶವಾಗಿತ್ತು. ಸೈಟ್ ಬಿಡುಗಡೆ ಕೂಡ ಇದರ ಪರಿಶ್ರಮದ ಫಲವಾಗಿದೆ, ಸರ್ಕಾರದ ಅಭಿವೃದ್ಧಿ ಹಾಗೂ ಆಡಳಿತದ ಕುರಿತಂತೆ ಚರ್ಚೆ ನಡೆಸಲು ಜನರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.