ಎನ್ ಡಿ ಎ ಸರ್ಕಾರದ ಸಾಧನ ಸಮಾರಂಭದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್
ಎನ್ಡಿಎ ಸರ್ಕಾರದ ದ್ವಿತೀಯ ವಾರ್ಷಿಕ ಸಾಧನಾ ಸಮಾವೇಶ ಸಂಭ್ರಮ ಇಂಡಿಯಾ ಗೇಟ್ ಆವರಣದಲ್ಲಿ ನಡೆಯಲಿದ್ದು, ಖ್ಯಾತ ಬಾಲಿವುಡ್ ನಟ, ಸೂಪರ್ ಸ್ಟಾರ್...

ನವದೆಹಲಿ: ಎನ್ಡಿಎ ಸರ್ಕಾರದ ದ್ವಿತೀಯ ವಾರ್ಷಿಕ ಸಾಧನಾ ಸಮಾವೇಶ ಸಂಭ್ರಮ ಇಂಡಿಯಾ ಗೇಟ್ ಆವರಣದಲ್ಲಿ ನಡೆಯಲಿದ್ದು, ಖ್ಯಾತ ಬಾಲಿವುಡ್ ನಟ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಈ ಸಂದರ್ಭದಲ್ಲಿ ಸರ್ಕಾರದ ಸಾಧನೆ, ನೂತನ ಯೋಜನೆ, ಮುಂದಿನ ಗುರಿ ಇತ್ಯಾದಿ ಬಗ್ಗೆ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಚ್ಚನ್ ಅವರಿಗೆ ಮೋದಿ ಈಗಾಗಲೇ ಅಧಿಕೃತ ಆಹ್ವಾನ ನೀಡಿದ್ದಾರೆ. ಮೋದಿ ಸಂಪುಟದ ಎಲ್ಲಾ ಸಚಿವರು ಸಮಾರಂಭದಲ್ಲಿ ಹಾಜರಾಗಲಿದ್ದಾರೆ.
ಸಂಜೆ 5 ರಿಂದ ರಾತ್ರಿ 10 ರ ವರೆಗೆ 5 ತಾಸು ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೂರದರ್ಶನದ ನೇರ ಪ್ರಸಾರ ಮಾಡಲಿದೆ.ದೇಶ್ ಬದಲ್ ರಹಾ ಹೈ ’ ಎಂಬುದು ಇಡೀ ಕಾರ್ಯಕ್ರಮದ ಥೀಮ್ ಸಾಂಗ್ ಆಗಿ ಹೊಮ್ಮಲಿದೆ. ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಜತೆ ಬಚ್ಚನ್ ಉಪಸ್ಥಿತಿ ವಿಶೇಷ ತಾರಾ ಮೆರುಗು ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


