ದೇಶ

ಐತಿಹಾಸಿಕ ಗೆಲುವು ನೀಡಿದ ತಮಿಳುನಾಡು ಜನತೆಗೆ ಜಯಾ ಅಭಿನಂದನೆ

ಇದೊಂದು ಐತಿಹಾಸಿಕ ಗೆಲುವು ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು,...

ಐತಿಹಾಸಿಕ ಗೆಲುವು ನೀಡಿದ ತಮಿಳುನಾಡು ಜನತೆಗೆ ಜಯಾ ಅಭಿನಂದನೆ
ಜಯಲಲಿತಾ
Published On :
ಚೆನ್ನೈ: ಇದೊಂದು ಐತಿಹಾಸಿಕ ಗೆಲುವು ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು, ಪಕ್ಷದ ಐತಿಹಾಸಿಕ ಗೆಲುವಿಗೆ ಕಾರಣರಾದ ತಮಿಳು ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚುನಾವಣೆ ಫಲಿತಾಂಶದ ಬಳಿಕ ಪೋಯಸ್ ಗಾರ್ಡ್ ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಯಲಲಿತಾ, ಐತಿಹಾಸಿಕ ಗೆಲುವು ನೀಡಿದ ನನ್ನ ಜನತೆಗೆ ಧ್ಯನವಾದಗಳು. ನನ್ನ ಮಕ್ಕಳು, ಅಣ್ಣ, ತಮ್ಮ, ಅಕ್ಕ-ತಂಗಿಯರಿಗಾಗಿ ದುಡಿಯುವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 1982ರ ನಂತರ ಯಾವುದೇ ಪಕ್ಷ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ ನೀವು ಎರಡನೇ ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ನಿಮಗೆ ಕೃತಜ್ಞತೆ ತಿಳಿಸಲು ನನ್ನ ಬಳಿ ಮಾತುಗಳೇ ಇಲ್ಲ ಎಂದು ಅಮ್ಮಾ ಹೇಳಿದ್ದಾರೆ.
ನಮ್ಮ ಮೇಲೆ ಅಧಿನಾಯಕ ಎಂಜಿಆರ್ ಅವರ ಆರ್ಶೀವಾದವಿದೆ. ಜನರ ಅಭಿವೃದ್ಧಿ ಬಿಟ್ಟರೆ ನನಗೆ ಬೇರೆ ಗುರಿ ಇಲ್ಲ. ಇಷ್ಟು ದಿನ ರಾಜ್ಯದ ಅಭಿವೃದ್ಧಿಗಾಗಿ ದುಡಿದಿದ್ದೇನೆ. ಇನ್ನು ಮುಂದೆಯೂ ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತೇನೆ. ನನ್ನ ಕೊನೆಯುಸಿರಿರುವವರೆಗೂ ಜನರಿಗಾಗಿ ದುಡಿಯುವೆ ಎಂದಿರುವ ಜಯಲಲಿತಾ, ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಸಾಂಪ್ರದಾಯಿಕ ಅಧಿಕಾರ ಬದಲಾವಣೆಗೆ ತಿಲಾಂಜಲಿ ಹಾಕಿರುವ ಜನತೆ ಸತತ 2ನೇ ಬಾರಿಗೆ ಜಯಲಲಿತಾ ಅವರಿಗೆ  ಸ್ಪಷ್ಟ ಬಹುಮತ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.