ಮಂಗಳಮುಖಿ ಬಟ್ಟೆ ಕಳುಚುತ್ತಿರುವ ದೃಶ್ಯ ಚಿತ್ರೀಕರಿಸಿ ವೀಡಿಯೋ ಹಂಚಿದ ಪೊಲೀಸ್ ವಜಾ
ಮಂಗಳಮುಖಿಯೊಬ್ಬರು ಬಟ್ಟೆ ಕಳಚುತ್ತಿರುವ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿ ಆ ವೀಡಿಯೋವನ್ನು ಸಹೋದ್ಯೋಗಿಗಳಿಗೆ ಹಂಚಿದ ಆರೋಪದಲ್ಲಿ...

Published On :
ನವದೆಹಲಿ: ಮಂಗಳಮುಖಿಯೊಬ್ಬರು ಬಟ್ಟೆ ಕಳಚುತ್ತಿರುವ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿ ಆ ವೀಡಿಯೋವನ್ನು ಸಹೋದ್ಯೋಗಿಗಳಿಗೆ ಹಂಚಿದ ಆರೋಪದಲ್ಲಿ ಇಲ್ಲಿನ ವಸಂತ್ ಕುಂಜ್ (ಉತ್ತರ) ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ನ್ನು ಬುಧವಾರ ಕೆಲಸದಿಂದ ವಜಾಗೊಳಿಸಲಾಗಿದೆ.
ಇಂಥದೊಂದು ಕೃತ್ಯವನ್ನು ಮಾಡುವುದು ನಾಚಿಕೆಗೇಡು. ಆತನನ್ನು ಈಗ ವಜಾ ಮಾಡಿದ್ದು, ಪ್ರಾಥಮಿಕ ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ದಕ್ಷಿಣ) ನೂಪುರ್ ಪ್ರಸಾದ್ ಹೇಳಿದ್ದಾರೆ.
ಏನಿದು ಘಟನೆ?
ಆಟೋಚಾಲಕ ಮತ್ತು ಮಂಗಳಮುಖಿ ನಡುವಿನ ಜಗಳ ವಸಂತ್‌ಕುಂಜ್ ಪೊಲೀಸ್ ಠಾಣೆಯ ಮೆಟ್ಟಲೇರಿತ್ತು. ಮಂಗಳಮುಖಿಯನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಂತೆ ಸಿಟ್ಟಿಗೆದ್ದ ಮಂಗಳಮುಖಿ ತನ್ನ ಬಟ್ಟೆಯನ್ನು ಅಲ್ಲೇ ಕಳಚಿದ್ದಾರೆ. ಮಂಗಳಮುಖಿ ಬಟ್ಟೆ ಕಳಚುತ್ತಿರುವ ದೃಶ್ಯವನ್ನು ಸಬ್ ಇನ್ಸ್‌ಪೆಕ್ಟರ್ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಆ ವೀಡಿಯೋವನ್ನು ಸಹೋದ್ಯೋಗಿಗಳಿಗೆ ಹಂಚಿದ್ದರು.
ಅನಾಮಿಕರೊಬ್ಬರು ಈ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ದೂರು ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


