ಮಂಗಳಮುಖಿ

ಮಹಿಳೆಯರು-ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ: ಸಚಿವ ರಾಮಲಿಂಗಾ ರೆಡ್ಡಿ
ಮಹಿಳೆಯರು ಹಾಗೂ ಮಂಗಳಮುಖಿಯರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ಇಂದು ಬೆಂಗಳೂರಿನ ಯಾವುದೇ ಜಾಗಕ್ಕೆ ತೆರಳ ಬೇಕಿದ್ದರೂ ಆಟೋ ಅನಿವಾರ್ಯವಾಗಿದ್ದು, ಬೆಂಗಳೂರಿಗರ ಬೆನ್ನೆಲುಬಾಗಿ ನಿಂತಿದೆ.

ಭಿಕ್ಷಾಟನೆ ಬಿಟ್ಟು ಸ್ವಾವಲಂಬನೆ ಮೆರೆದ ಮಂಗಳಮುಖಿ: ಅವಮಾನವನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡ ಅನಿ ಮಂಗಳೂರು!
ಬಿಎ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು, ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣ ಮೊಟಕುಗೊಳಿಸಿದ್ದರು. ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ.

ಕತ್ತಲೆಯಿಂದ ಬೆಳಕಿನೆಡೆಗೆ: ಅನಾಥ ಬಾಲಕಿ ದತ್ತು ಪಡೆದು 'ಕಿಕ್ ಬಾಕ್ಸರ್' ಆಗಿ ಪರಿವರ್ತಿಸಿದ ಮಂಗಳಮುಖಿ!
ಅಲ್ಪಸಂಖ್ಯಾತ ಸಮುದಾಯದ ಅಕ್ರಂ ಪಾಷಾ (ಶಬಾನಾ) ಅವರು ಬೀಬಿ ಫಾತಿಮಾ ಅವರನ್ನು 20 ವರ್ಷಗಳ ಹಿಂದೆ ದತ್ತು ಪಡೆದು, ಸಾಕಿ-ಸಲಹಿದ್ದಾರೆ.

ನಾಪತ್ತೆಯಾದ ಗಂಡ ಪತ್ತೆಯಾಗಿದ್ದು ಮಂಗಳಮುಖಿಯಾಗಿ; ಸುಳಿವು ಕೊಟ್ಟಿದ್ದು 'ಬಿಗ್ ಬಾಸ್'!
ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಲಿಂಗ ಬದಲಾವಣೆ ಮಾಡಿಕೊಂಡು ಪತ್ತೆಯಾದ ಘಟನೆ ರಾಮನಗರದಲ್ಲಿ ವರದಿಯಾಗಿದೆ.

ಚಿತ್ರದುರ್ಗ: ಮಂಗಳಮುಖಿ ಸಾಕಿದ್ದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳ ಕದ್ದೊಯ್ದ ಕಳ್ಳರು!
ಸ್ವಾವಲಂಬಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಮಂಗಳಮುಖಿಯೊಬ್ಬರಿಗೆ ಸೇರಿದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳನ್ನು ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ.

ಮಂಗಳಮುಖಿಯರಿಂದ ನಿರ್ವಾಹಕನ ಮೇಲೆ ಹಲ್ಲೆ
ತಾಲೂಕಿನ ಮರಳಿ ಟೋಲ್ಗೇಟ್ಗೆ ಟಿಕೆಟ್ ತೆಗಸುವ ವಿಚಾರಕ್ಕೆ ಮಂಗಳಮುಖಿಯರು ಹಾಗೂ ಕಂಡಕ್ಟರ್ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.

ಶಬರಿಮಲೆ ದೇವಾಸ್ಥಾನದಲ್ಲಿ ಮಂಗಳ ಮುಖಿಯರ ಪ್ರವೇಶಕ್ಕೆ ಪೊಲೀಸರ ತಡೆ
ಶಬರಿ ಮಲೆ ದೇಗುಲ ಪ್ರವೇಶಿಸದಂತೆ ಮಂಗಳಮುಖಿಯರಿಗೆ ಕೇರಳ ಪೊಲೀಸರು ತಡೆ ಹಾಕಿದ್ದಾರೆ..

ಸತ್ಯಶ್ರೀ ಶರ್ಮಿಳಾ: ದೇಶದ ಮೊಟ್ಟ ಮೊದಲ ತೃತೀಯ ಲಿಂಗಿ ವಕೀಲೆ
ಮುಖ್ಯವಾಹಿನಿಗೆ ಬರಲು ಹಿಂಜರಿಯುತ್ತಿದ್ದ ತೃತೀಯಲಿಂಗಿಗಳು ಅಥವಾ ಮಂಗಳಮುಖಿಯರು ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್, ನಟಿ, ಎಸ್ಐ, ಸುದ್ದಿ ವಾಚಕಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಆರಂಭಿಸಿದ್ದು, ಇದೀಗ ವಕೀಲ ವೃತ್ತಿಗೂ ಪಾದಾರ್ಪಣೆ ಮಾಡಿದ್ದಾರೆ...

ಪಟಾಕಿ ಚಿತ್ರದಲ್ಲಿ ಮಂಗಳಮುಖಿಯಾಗಿ ಸಾಧು ಕೋಕಿಲ
ಸ್ಯಾಂಡಲ್ವುಡ್ ನ ಬಹುಬೇಡಿಕೆಯ ಹಾಸ್ಯ ನಟ ಸಾಧು ಕೋಕಿಲ ಅವರು ಪಟಾಕಿ ಚಿತ್ರದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ...

