ಉಗ್ರ ನಿಗ್ರಹಕ್ಕಾಗಿ ರಾಷ್ಟ್ರೀಯ ತನಿಖಾ ದಳವನ್ನು ಬಲಪಡಿಸಲು ಕೇಂದ್ರದ ನಿರ್ಧಾರ
ಭಯೋತ್ಪಾದನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಮತ್ತು ದೇಶದ ರಕ್ಷಣಾ ವ್ಯವಸ್ಥೆಗೆ ಆತಂಕವಾಗಬಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಸ್ತಿತ್ವಕ್ಕೆ ತರಲಾಗಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಎನ್ ಡಿಎ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಮತ್ತು ದೇಶದ ರಕ್ಷಣಾ ವ್ಯವಸ್ಥೆಗೆ ಆತಂಕವಾಗಬಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಸ್ತಿತ್ವಕ್ಕೆ ತರಲಾಗಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಎನ್ ಡಿಎ ಸರ್ಕಾರ ನಿರ್ಧರಿಸಿದೆ.
ಸರ್ಕಾರದ ಮೂಲಗಳ ಪ್ರಕಾರ ರಾಷ್ಟ್ರೀಯ ತನಿಖಾ ದಳಕ್ಕೆ ಹೆಚ್ಚುವರಿ ಅಧಿಕಾರ ನೀಡಬಲ್ಲ ನೂತನ ಮಸೂದೆಯ ಕರಡನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಗೃಹ ಸಚಿವಾಲಯ ಸಂಪುಟ ಟಿಪ್ಪಣಿ ಹೊರಡಿಸಿದೆ. ಗೃಹ ಇಲಾಖೆಯ ಅನುಮೋದನೆ ದೊರೆತ ಬಳಿಕ ಈ ನೂತನ ಕರಡನ್ನು ಸಂಸತ್ ನ ಉಭಯ ಸದನಗಳಲ್ಲಿ ಮಂಡನೆಯಾಗಲಿದೆ. ನೂತನ ಕರಡಿನಲ್ಲಿ ಎನ್ ಐಎ ಸಂಸ್ಥೆಯನ್ನು ಬಲಪಡಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಉಗ್ರ ಸಂಘಟನೆಗಳ ಗುಂಪಿನಲ್ಲಿ ಗೂಢಚಾರರಾಗಿ ಸೇರಿಕೊಂಡು ಗುಪ್ತ ಕಾರ್ಯಾಚರಣೆ ನಡೆಸುವ ಅಧಿಕಾರ ನೀಡಲು ಗಂಭೀರ ಚಿಂತನೆ ನಡೆಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ರಾಷ್ಟ್ರೀಯ ತನಿಖಾ ದಳ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನಿಖೆ ನಡೆಸಬಲ್ಲ ಅಧಿಕಾರ ಪಡೆಯಲಿದ್ದು, ವಿದೇಶಗಳಲ್ಲಿ ನಡೆದ ಉಗ್ರ ಚಟುವಟಿಕೆಗಳಲ್ಲಿ ಭಾರತಕ್ಕೆ ಸಂಬಂಧಿಸಿದ ಆಯಾಮದ ಬಗ್ಗೆ ತನಿಖೆ ನಡೆಸುವ ಅಧಿಕಾರಿವನ್ನೂ ಎನ್‌ಐಎಗೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮುಂಬೈ ದಾಳಿ ಪ್ರಕರಣ, ಪಠಾಣ್ ಕೋಟ್ ಉಗ್ರ ದಾಳಿ ಸೇರಿದಂತೆ ದೇಶದಲ್ಲಿ ನಡೆದ ಅನೇಕ ಭಕ್ಯೋತ್ಪಾದನಾ ದಾಳಿಗಳಲ್ಲಿ ಪಾಕಿಸ್ತಾನ ಮೂಲದ ಉಗ್ರರ ನಂಟಿದ್ದು, ಈ ಬಗ್ಗೆ ಪರಿಣಾಮಕಾರಿ ತನಿಖೆ ನಡೆಸಲು ಎನ್ ಐಎಗೆ ಸರ್ಕಾರದ ನೂತನ ತಿದ್ದಪಡಿ ಕರಡು ನೆರವಾಗಲಿದೆ.
ಭಯೋತ್ಪಾದನಾ ಸಂಘಟನೆಗಳ ಕುರಿತು ಮಾಹಿತಿ ಸಂಗ್ರಹಿಸಲು ಗುಪ್ತಚರ ಸಿಬ್ಬಂದಿಯನ್ನು ಸಂಘಟನೆಯೊ ಒಳಗೇ ನಿಯೋಜಿಸಿ, ಮಾಹಿತಿ ಸಂಗ್ರಹಿಸುವ ತಂತ್ರವನ್ನು ಈಗಾಗಲೇ ಅಮೆರಿಕದ ಸಿಐಎ ಸೇರಿ ಹಲವು ಸಂಸ್ಥೆಗಳು ನಡೆಸುತ್ತಿದ್ದು, ಸರ್ಕಾರದ ನೂತನ ಕರಡು ಅನುಮೋದನೆ ಪಡೆದರೆ ಆ ಪಟ್ಟಿಗೆ ಭಾರತವೂ ಕೂಡ ಸೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


