ಮದ್ಯ ನಿಷೇಧ ಎಫೆಕ್ಟ್; ನಕಲಿ ಮದ್ಯ ಸೇವಿಸಿ ಕಣ್ಣು ಕಳೆದುಕೊಂಡ ಬಿಹಾರದ ವ್ಯಕ್ತಿ
ಬಿಹಾರ ಸರ್ಕಾರದ ಮದ್ಯ ನಿಷೇಧ ಅಲ್ಲಿನ ಮದ್ಯ ವ್ಯಸನಿಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನಕಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬನ ತನ್ನ ಕಣ್ಣುಗಳನ್ನೇ ಕಳೆದುಕೊಂಡ ಘಟನೆ ನಡೆದಿದೆ...

ಗಯಾ: ಬಿಹಾರ ಸರ್ಕಾರದ ಮದ್ಯ ನಿಷೇಧ ಅಲ್ಲಿನ ಮದ್ಯ ವ್ಯಸನಿಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನಕಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬನ ತನ್ನ ಕಣ್ಣುಗಳನ್ನೇ ಕಳೆದುಕೊಂಡ ಘಟನೆ ನಡೆದಿದೆ.
ಬಿಹಾರದ ಗಯಾ ಮೂಲದ ವ್ಯಕ್ತಿ ರಾಜ್ ಕುಮಾರ್ ಗುಪ್ತಾ ಎಂಬಾತ ನಕಲಿ ಮದ್ಯ ಸೇವಿಸಿ ಇದೀಗ ಆಸ್ಪತ್ರೆ ಪಾಲಾಗಿದ್ದು, ಆತನ ಕಣ್ಣುಗಳು ಗಂಭೀರ ಸ್ವರೂಪದಲ್ಲಿ ಹಾನಿಗೀಡಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಬಿಹಾರದಲ್ಲಿ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಈ ವೇಳೆ ರಾಜ್ ಕುಮಾರ್ ಗುಪ್ತಾ ರಾಜಕೀಯ ಪಕ್ಷಗಳು ಹಂಚಿದ್ದ ನಕಲಿ ಮದ್ಯವನ್ನು ಸೇವಿಸಿ ಅನಾರೋಗ್ಯಕ್ಕೀಡಾಗಿದ್ದ. ಕೂಡಲೇ ಆತನನ್ನು ಮಗದ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಇದೀಗ ರಾಜ್ ಕುಮಾರ್ ಗುಪ್ತನ ಕಣ್ಣುಗಳು ಹೋಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಬಿಹಾರದ ಗಯಾದಲ್ಲಿ ಈ ರೀತಿ ರಾಜಕೀಯ ಪಕ್ಷಗಳು ಹಂಚಿದ್ದ ನಕಲಿ ಮಧ್ಯ ಸೇವಿಸಿ ಈ ಹಿಂದೆ ಇಬ್ಬರು ಜೀವವನ್ನೇ ಕಳೆದುಕೊಂಡ ಕುರಿತು ವರದಿಯಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


