ದೇಶ

ಹಬ್ಬ-ಉತ್ಸವಗಳ ಬದಲು ಶಿಕ್ಷಣಕ್ಕೆ ಹಣ ಖರ್ಚು ಮಾಡಿ:ದೇವಾಲಯಗಳಿಗೆ ಆರ್ ಎಸ್ ಎಸ್ ಸಲಹೆ

ಮಹಿಳೆಯರ ದೇಗುಲ ಪ್ರವೇಶಕ್ಕೆ ಹೋರಾಡಿದ ನಂತರ ಆರ್ ಎಸ್ ಎಸ್, ದುಂದುಗಾರಿಕೆ ಬಿಟ್ಟು ದಾನ ಧರ್ಮಗಳಿಗೆ ದೇಗುಲಗಳು ಹಣ ನೀಡಲಿ ಎಂದು ಸಲಹೆ ನೀಡಿದೆ...

ಹಬ್ಬ-ಉತ್ಸವಗಳ ಬದಲು ಶಿಕ್ಷಣಕ್ಕೆ ಹಣ ಖರ್ಚು ಮಾಡಿ:ದೇವಾಲಯಗಳಿಗೆ ಆರ್ ಎಸ್ ಎಸ್ ಸಲಹೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮಹಿಳೆಯರ ದೇಗುಲ ಪ್ರವೇಶಕ್ಕೆ ಹೋರಾಡಿದ ನಂತರ ಆರ್ ಎಸ್ ಎಸ್, ದುಂದುಗಾರಿಕೆ ಬಿಟ್ಟು ದಾನ ಧರ್ಮಗಳಿಗೆ ದೇಗುಲಗಳು ಹಣ ನೀಡಲಿ ಎಂದು ಸಲಹೆ ನೀಡಿದೆ.

ಹಬ್ಬದ ಸಂದರ್ಭಗಳಲ್ಲಿ ನಡೆಸುವ ಉತ್ಸವ, ಮಿಮಿಕ್ರಿ, ಸುಡುಮದ್ದು, ಚಿತ್ರ ಪ್ರದರ್ಶನ ಹಾಗೂ ಪ್ರಾಣಿಗಳ ಮೆರವಣಿಗೆಗೆ ಹಣ ವ್ಯರ್ಥ ಮಾಡುವ ಬದಲು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಆರ್ಥಿಕ ಸಹಾಯ ನೀಡಿ ಎಂದು ದೇಗುಲ ಮಂಡಳಿಗಳಿಗೆ ಆರೆಸ್ಸೆಸ್‌ ಮನವಿ ಮಾಡಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ದೇಗುಲ ಸಂಸ್ಕೃತಿಗೆ ಒಗ್ಗುವಂಥದ್ದಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತಿದೆ. ಇವೆಲ್ಲ ದುಂದುಗಾರಿಕೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಗುಲ ಹಾಗೂ ಸ್ಥಳೀಯ ಸಂಪ್ರದಾಯಕ್ಕೆ ಬದ್ಧವಾಗಿರಬೇಕು. ಅಶ್ಲೀಲತೆಗೆ ಅವಕಾಶ ನೀಡಬಾರದು ಆರ್ ಎಸ್ ಎಸ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.