ದೇಶ

ಇಂಡೋ-ಆಸಿಸ್ ಸಮರ: ಸ್ಥಳೀಯರ ಸಂಭ್ರಮಾಚರಣೆಯಿಂದಾಗಿ ದುಬಾರಿ ಬೆಲೆ ತೆತ್ತ ಕುಟುಂಬ

ಟಿ-20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ನಡುವಿನ ಸಮರದ ವೇಳೆ ಸ್ಥಳೀಯರು ಮಾಡಿದ ಸಂಭ್ರಮಾಚರಣೆಯಿಂದಾಗಿ ಕುಟುಂಬವೊಂದು ದುಬಾರಿ ಬೆಲೆ ತೆರಬೇಕಾದ...

ಇಂಡೋ-ಆಸಿಸ್ ಸಮರ: ಸ್ಥಳೀಯರ ಸಂಭ್ರಮಾಚರಣೆಯಿಂದಾಗಿ ದುಬಾರಿ ಬೆಲೆ ತೆತ್ತ ಕುಟುಂಬ
ಸಾಂದರ್ಭಿಕ ಚಿತ್ರ
Published On :

ಘಾಜಿಯಾಬಾದ್: ಟಿ-20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ನಡುವಿನ ಸಮರದ ವೇಳೆ ಸ್ಥಳೀಯರು ಮಾಡಿದ ಸಂಭ್ರಮಾಚರಣೆಯಿಂದಾಗಿ ಕುಟುಂಬವೊಂದು ದುಬಾರಿ ಬೆಲೆ ತೆರಬೇಕಾದ ಸಂದರ್ಭ ಎದುರಾಗಿದೆ.

ಭಾನುವಾರ ನಡೆದ ಟಿ-20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ಸಾಕಷ್ಟು ರೋಚಕತೆಯನ್ನುಂಟು ಮಾಡಿತ್ತು. ಭಾರತ ಗೆಲುವಿನ ದಡ ಸೇರುತ್ತಿದ್ದಂತೆ ಜನತೆ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಇದರಂತೆ ಘಾಜಿಯಾಬಾದ್ ನಲ್ಲಿರುವ ಸ್ಥಳೀಯರು ಕೂಡ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡುತ್ತಿತ್ತು. ಆದರೆ, ಇದೇ ಸಂಭ್ರಮಾಚರಣೆ ಇದೀಗ ಕುಟುಂಬವೊಂದು ದುಬಾರಿ ಬೆಲೆ ತೆರುವಂತಾಗಿದೆ.

ಸುನೀಲ್ ಕುಮಾರ್ ಎಂಬುವವರು ಘಾಜಿಯಾಬಾದ್ ನ ರಾಜ್ ನಗರದಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದರಂತೆ ಮನೆಯ ಸಾಮಾಗ್ರಿಗಳನ್ನು ಟ್ರಕ್ ಮೂಲಕ ಹೊಸ ಮನೆಗೆ ಸಾಗಿಸುತ್ತಿದ್ದರು. ಸಾಮಾಗ್ರಿಗಳನ್ನು ಟ್ರಕ್ ಗೆ ಸುಲಭವಾಗಿ ಸಾಗಿಸುವ ಸಲುವಾಗಿ ಟ್ರಕ್ ಚಾಲಕ ವಾಹನವನ್ನು ಮನೆಯ ಪಕ್ಕದಲ್ಲೇ ನಿಲ್ಲಿಸಿದ್ದ.

ಟಿ-20 ಪಂದ್ಯಾವಳಿಯಲ್ಲಿ ಭಾರತ ಗೆಲವು ಸಾಧಿಸುತ್ತಿದ್ದಂತೆ ಅಲ್ಲಿನ ಸ್ಥಳೀಯರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಪಟಾಕಿಯ ಕಿಡಿಗಳು ಟ್ರಕ್ ನಲ್ಲಿರಿಸಲಾಗಿದ್ದ ಹಾಸಿಗೆಯ ಮೇಲೆ ಬಿದ್ದಿದೆ. ಇದರಿಂದಾಗಿ  ಕ್ಷಣಾರ್ಧದಲ್ಲೇ ಬೆಂಕಿ ಟ್ರಕ್ ಸುತ್ತಲೂ ಆವರಿಸಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿದ್ದರಾದರೂ, ಟ್ರಕ್ ನಲ್ಲಿದ್ದ ಸಾಮಾಗ್ರಿಗಳೆಲ್ಲವೂ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.