ಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ
ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರೈಲ್ವೆ ಇಲಾಖೆ, ಈಗಾಗಲೇ ಕಾಯ್ದಿರಿಸಲಾಗಿರುವ ರೈಲ್ವೆ ಟಿಕೆಟ್ ನ್ನು ದೂರವಾಣಿ ಕರೆ ಮೂಲಕ ರದ್ದುಗೊಳಿಸುವ ವ್ಯವಸ್ಥೆಯನ್ನು ಏಪ್ರಿಲ್ ನಿಂದ ಜಾರಿಗೆ ತರಲಿದೆ.

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರೈಲ್ವೆ ಇಲಾಖೆ, ಈಗಾಗಲೇ ಕಾಯ್ದಿರಿಸಲಾಗಿರುವ ರೈಲು ಟಿಕೆಟ್ ನ್ನು ದೂರವಾಣಿ ಕರೆ ಮೂಲಕ ರದ್ದುಗೊಳಿಸುವ ವ್ಯವಸ್ಥೆಯನ್ನು ಏಪ್ರಿಲ್ ನಿಂದ ಜಾರಿಗೆ ತರಲಿದೆ.
ಟಿಕೆಟ್ ಕೌಂಟರ್ ಗಳಿಗೆ ತೆರಳಿ ಕಾಯ್ದಿರಿಸಲಾಗಿರುವ ಟಿಕೆಟ್ ಗಳನ್ನು ರದ್ದುಗೊಳಿಸುವುದಕ್ಕೆ ಸಮಸ್ಯೆ ಎದುರಿಸುವ ಪ್ರಯಾಣಿಕರಿಗೆ ಈ ವ್ಯವಸ್ಥೆ ಉಪಯುಕ್ತವಾಗಲಿದೆ. ಇದಕ್ಕಾಗಿ ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ಮಾಡಬೇಕಿರುವುದು ಇಷ್ಟೇ. 139 ಕರೆ ಮಾಡಿ ಕಾಯ್ದಿರಿಸಲಾಗಿರುವ ಟಿಕೆಟ್ ನ ವಿವರಗಳನ್ನು ನೀಡಬೇಕು, ನಂತರ ರೈಲ್ವೆ ಇಲಾಖೆಯಿಂದ ಪ್ರಯಾಣಿಕರ ದೂರವಾಣಿಗೆ(ಮೊಬೈಲ್ ಗೆ) ಒನ್ ಟೈಮ್ ಪಾಸ್ವರ್ಡ್ ಕಲಿಸಲಾಗುತ್ತದೆ. ಕರೆ ಮಾಡಿದ ದಿನದಂದೇ ಟಿಕೆಟ್ ಕೌಂಟರ್ ಗೆ ಹೋಗಿ ಪಾಸ್ವರ್ಡ್ ನ್ನು ಹೇಳಿದರೆ ಹಣ ವಾಪಸ್ ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಕೆಟ್ ಹಣವನ್ನು ವಾಪಸ್ ಪಡೆಯಬೇಕಾದರೆ ಪ್ರಯಾಣಿಕರು ಹಲವು ಸಮಸ್ಯೆ ಎದುರಿಸುತ್ತಿದ್ದು, ಟಿಕೆಟ್ ಹಣವನ್ನು ನಿಗದಿತ ಸಮಯದಲ್ಲಿ ವಾಪಸ್ ಪಡೆಯುವ ವ್ಯವಸ್ಥೆ ಕಠಿಣವಾಗಿದೆ. ಹೊಸ ನಿಯಮಗಳ ಪ್ರಕಾರ ಟಿಕೆಟ್ ರದ್ದುಗೊಳಿಸುವ ನೈಜ ಪ್ರಯಾಣಿಕರಿಗೆ ಸಹಾಯವಾಗಲೆಂದು ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಪ್ರಯಾಣಿಕರು ಟಿಕೆಟ್ ಹಣ ವಾಪಸ್ ಪಡೆಯುವುದು ಮತ್ತಷ್ಟು ಸುಲಭವಾಗಿಸಲು ಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲ್ವೆ ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


