ದೇಶ

ಪಠಾಣ್ ಕೋಟ್ ದಾಳಿ: ಸೋಮವಾರ ದೆಹಲಿಗೆ ಆಗಮಿಸಲಿದೆ ಪಾಕ್ ತನಿಖಾ ತಂಡ

ಕಳೆದ ಜನವರಿಯಲ್ಲಿ ನಡೆದ ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆಗಾಗಿ ಪಾಕಿಸ್ತಾನದ ಭದ್ರತಾ ಅಧಿಕಾರಿಗಳ ತಂಡ ಸೋಮವಾರ ದೆಹಲಿಗೆ ಆಗಮಿಸಿಲಿದೆ.

ಪಠಾಣ್ ಕೋಟ್ ದಾಳಿ: ಸೋಮವಾರ ದೆಹಲಿಗೆ ಆಗಮಿಸಲಿದೆ ಪಾಕ್ ತನಿಖಾ ತಂಡ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಕಳೆದ ಜನವರಿಯಲ್ಲಿ ನಡೆದ ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆಗಾಗಿ ಪಾಕಿಸ್ತಾನದ ಭದ್ರತಾ ಅಧಿಕಾರಿಗಳ ತಂಡ ಸೋಮವಾರ ದೆಹಲಿಗೆ ಆಗಮಿಸಿಲಿದೆ.
ಐವರು ಸದಸ್ಯರ ಪಾಕ್ ತನಿಖಾ ತಂಡ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಐಎ)ಯ ಪ್ರಧಾನ ಕಚೇರಿಗೆ ಭೇಟಿ ನೀಡಿಲಿದ್ದು, ಮಂಗಳವಾರ ಪಠಾಣ್ ಕೋಟ್ ಗೆ ತೆರಳಲಿದೆ ಎಂದು ಎಎನ್ಐ ವರದಿ ಮಾಡಿದೆ.
ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸುತ್ತಿರುವ ಪಾಕ್ ತನಿಖಾ ತಂಡಕ್ಕೆ ಭಾರತ ಸರ್ಕಾರ ಇತ್ತೀಚಿಗಷ್ಟೆ ವೀಸಾ ನೀಡಿತ್ತು.
ಜ.2 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯು ನೆಲೆಯಲ್ಲಿ  ದಾಳಿ ನಡೆಸಿದ್ದ ಭಯೋತ್ಪಾದಕರಿಗೂ ಪಾಕಿಸ್ತಾನದ ಜೈಶ್-ಇ- ಮೊಹಮ್ಮದ್ ಉಗ್ರ ಸಂಘಟನೆಗೂ ನಂಟಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ರಚನೆ ಮಾಡಿರುವ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.