ಪಠಾಣ್ ಕೋಟ್: ನಾಪತ್ತೆಯಾಗಿದ್ದ ಕಾರು ಪತ್ತೆ
ಜಮ್ಮು ಮತ್ತು ಕಾಶ್ಮೀರ ಗಡಿಗೆ ಹೊಂದಿಕೊಂಡಿರುವ ಪಂಜಾಬ್ ನ ಸುಜನ್ಪುರ್ದ ಪಠಾಣ್ ಕೋಟ್ ನಲ್ಲಿ ಕಾಣೆಯಾಗಿದೆ ಎಂದು ಹೇಳಲಾಗುತ್ತಿದ್ದ...

ಪಠಾಣ್ಕೋಟ್: ಜಮ್ಮು ಮತ್ತು ಕಾಶ್ಮೀರ ಗಡಿಗೆ ಹೊಂದಿಕೊಂಡಿರುವ ಪಂಜಾಬ್ ನ ಸುಜನ್ಪುರ್ದ ಪಠಾಣ್ ಕೋಟ್ ನಲ್ಲಿ ಕಾಣೆಯಾಗಿದೆ ಎಂದು ಹೇಳಲಾಗುತ್ತಿದ್ದ ಕಾರೊಂದು ಇದೀಗ ಪತ್ತೆಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ.
ಸುಜನ್ ಪುರ್ ಸಮಾಪ ಪಠಾಣ್ ಕೋಟ್-ಜಮ್ಮು ಹೆದ್ದಾರಿಯಲ್ಲಿ ಲಿಫ್ಟ್ ಕೇಳುವ ನೆಪದಲ್ಲಿ ಮೂವರು ವ್ಯಕ್ತಿಗಳು ನಿಂತಿದ್ದರು. ಈ ವೇಳೆ ಕಾರು ನಿಲ್ಲಿಸಿ ಕಿಟಿಕಿಯನ್ನು ತೆಗೆದುಯುತ್ತಿದ್ದಂತೆ ಬೆದರಿಸಿ ಪಿಬಿ06 ಎಸ್8982 ನಂಬರಿನ ಕಾರನ್ನು ಅಪಹರಿಸಿದ್ದರು ಗೌರವ್ ಪಥಾನ್ಯಾ ಎಂಬುವವರು ಹೇಳಿಕೊಂಡಿದ್ದರು.
ಈ ಹಿಂದೆ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಧಿಕಾರಿಯೊಬ್ಬ ಕಾರನ್ನು ಅಪಹರಿಸಲಾಗಿತ್ತು. ಕಾರು ಅಪಹರಣವಾದ ಕೆಲವು ದಿನಗಳಲ್ಲೇ ಉಗ್ರರು ವಾಯುನೆಲೆ ಮೇಲೆ ದಾಳಿ ಮಾಡಿದ್ದರು.
ಇದರಂತೆ ಮತ್ತೆ ಇಂತಹದ್ದೇ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ನಂತರ ಪೊಲೀಸರು ಕಾರು ಪತ್ತೆಯಾಗಿ ತನಿಖೆ ಆರಂಭಿಸಿದ್ದರು. ಪ್ರಸ್ತುತ ನಾಪತ್ತೆಯಾಗಿದ್ದ ಕಾರು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಅಪಹರಣಕಾರರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


