ಮೋದಿ ದೇವರು ಕೊಟ್ಟ ಉಡುಗೊರೆ ಹೇಳಿಕೆ: ಅಸಮಾಧಾನ ವ್ಯಕ್ತಪಡಿಸಿದ ಆರ್‌ಎಸ್‌ಎಸ್
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ 'ಭಾರತಕ್ಕೆ ದೇವರು ಕೊಟ್ಟ ಉಡುಗೊರೆ ಮೋದಿ' ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ನೀಡಿದ್ದ ಹೇಳಿಕೆಗೆ ಇದೀಗ ಆರ್‌ಎಸ್‌ಎಸ್...

ನವದೆಹಲಿ: ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ 'ಭಾರತಕ್ಕೆ ದೇವರು ಕೊಟ್ಟ ಉಡುಗೊರೆ ಮೋದಿ' ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ನೀಡಿದ್ದ ಹೇಳಿಕೆಗೆ ಇದೀಗ ಆರ್‌ಎಸ್‌ಎಸ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜಸ್ತಾನದ ನಗೌರ್ ನಲ್ಲಿ ನಡೆದ ಪ್ರತಿನಿಧಿ ಸಭೆ ಆರ್‌ಎಸ್‌ಎಸ್, ಬಿಜೆಪಿ ನಾಯಕರೊಂದಿಗೆ ಭೇಟಿ ಮಾಡಿದ್ದು, ಸಭೆಯಲ್ಲಿ ವೆಂಕಯ್ಯ ನಾಯ್ಡು ಅವರು ನೀಡಿದ್ದ ಭಾರತಕ್ಕೆ ದೇವರು ಕೊಟ್ಟ ಉಡುಗೊರೆ ಮೋದಿ ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಸಭೆ ವೇಳೆ ಬಿಜೆಪಿ ಅಮಿತ್ ಶಾ ಜೊತೆಗೆ ಕೆಲವು ನಾಯಕರಿಗೆ ಆರ್‌ಎಸ್‌ಎಸ್ ಸಲಹೆಯನ್ನು ನೀಡಿದ್ದು, ರಾಷ್ಟ್ರೀಯತೆಯೊಂದಿಗೆ ಅಭಿವೃದ್ಧಿಯನ್ನು ಸೇರಿವಂತೆ ತಿಳಿದೆ. ಅಲ್ಲದೆ, ವೆಂಕಯ್ಯ ನಾಯ್ಡು ಹೇಳಿಕೆ ಅಸಮಾಧಾನ ವ್ಯಕ್ತಪಡಿಸಿ 'ವ್ಯಕ್ತಿ ಪೂಜೆ'ಗಿಂತ 'ಸಂಸ್ಥೆ ಸರ್ವೋಚ್ಛ'ವಾಗಿದೆ ಎಂದು ಹೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಜೆಎನ್ ಯು ವಿವಾದ ಹಾಗೂ ರೋಹಿತ್ ವೆಮುಲ ಪ್ರಕರಣದ ಕುರಿತು ಚರ್ಚೆಯಾಗಿರುವುದಾಗಿ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದಷ್ಟೇ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹಾಡಿಹೊಗಳಿದ್ದರು. ಮೋದಿಯವರು ಭಾರತಕ್ಕೆ ದೇವರು ಕೊಟ್ಟಿರುವ ಉಡುಗೊರೆಯಾಗಿದ್ದು, ಬಡವರ ಉದ್ಧಾರಕರಾಗಿದ್ದಾರೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


