ಹಿಂದೂ ಮೂಲಭೂತವಾದ ಇಸ್ಲಾಮಿಕ್ ಭಯೋತ್ಪಾದನೆಗಿಂತ ಭಯಾನಕ: ರಾಮಚಂದ್ರ ಗುಹ
ಇತಿಹಾಸಕಾರ-ಲೇಖಕ ರಾಮಚಂದ್ರ ಗುಹಾ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯವಾದದ ವಿರುದ್ಧ ಎಚ್ಚರಿಕೆಯಿಂದರಬೇಕು ಎಂದು ಕರೆ ನೀಡಿದ್ದಾರೆ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರನ್ನು ದೇಶದ ಅತಿ ಅಪಾಯಕಾರಿ ರಾಜಕಾರಣಿಗಳೆಂದು ಹೇಳಿರುವ ಇತಿಹಾಸಕಾರ-ಲೇಖಕ ರಾಮಚಂದ್ರ ಗುಹ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯವಾದದ ವಿರುದ್ಧ ಎಚ್ಚರಿಕೆಯಿಂದರಬೇಕು ಎಂದು ಕರೆ ನೀಡಿದ್ದಾರೆ.
ಸ್ಪ್ರಿಂಗ್ ಫೀವರ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ರಾಮಚಂದ್ರ ಗುಹಾ, ದೇಶ ವಿಭಜನೆ ಹಾಗೂ ರಾಮಜನ್ಮಭೂಮಿ ಚಳುವಳಿ ನಂತರ ದೇಶದಲ್ಲಿ ಹಿಂದೂ ರಾಷ್ಟ್ರೀಯತೆ ಹೆಚ್ಚಾಗಿದೆ. ಹಿಂದೂ ರಾಷ್ಟ್ರೀಯತೆ ದೇಶಕ್ಕೆ ಹೊಸದೇನು ಅಲ್ಲ. ದೇಶ ವಿಭಜನೆಯಾದ ಬೆನ್ನಲ್ಲೇ ಅದು ಹುಟ್ಟಿಕೊಂಡಿತ್ತು. ದೇಶ ವಿಭಜನೆ ಹಾಗೂ ರಾಮಜನ್ಮಭೂಮಿ ಚಳುವಳಿ ನಂತರ ಉಂಟಾದ ಹಿಂದೂ ರಾಷ್ಟ್ರೀಯತೆಗೆ ಆರ್ ಎಸ್ಎಸ್ ಕಾರಣ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಹಿಂದೂಗಳು ಶೇ.85 ರಷ್ಟು ಇರುವುದರಿಂದ ಹಿಂದೂ ಮೂಲಭೂತವಾದ ಇಸ್ಲಾಮಿಕ್ ಭಯೋತ್ಪಾದನೆಗಿಂತ ಭಯಾನಕವಾದದ್ದು, ಬಹುಸಂಖ್ಯಾತ ಹಿಂದೂಗಳ ಚಿಂತನೆಯ ಬಗ್ಗೆ ಭಯಭೀತನಾಗಿದ್ದೇನೆ. ಬಲಪಂಥೀಯ ಬುದ್ಧಿಜೀವಿಗಳನ್ನು ಹುಟ್ಟುಹಾಕುವುದರಲ್ಲಿ ವಿಫಲವಾಗಿರುವ ಬಿಜೆಪಿ ಬುದ್ದಿಜೀವಿ ವಿರೋಧಿ ಪಕ್ಷ, ಆರ್ ಎಸ್ಎಸ್ ನ ಗೋಳವಳ್ಕರ್ ಪರಮತವೈರಿ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


