ದೇಶ

15 ದಿನಗಳ ನಂತರ ಸಮಾಧಿಯಿಂದ ಎದ್ದುಬಂದ ದೇವ ಮಾನವ!

ಇಲ್ಲಿನ ಮಾದೇಪುರ ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸಮಾಧಿಯಾಗಿದ್ದ ದೇವಮಾನವನೊಬ್ಬ ಸಮಾಧಿಯಿಂದ ಎದ್ದು ಬಂದ ಘಟನೆ ವರದಿಯಾಗಿದೆ....

15 ದಿನಗಳ ನಂತರ ಸಮಾಧಿಯಿಂದ ಎದ್ದುಬಂದ ದೇವ ಮಾನವ!
ದೇವ ಮಾನವ ಪ್ರಮೋದ್ ಬಾಬಾ (ವೀಡಿಯೋದಿಂದ ತೆಗೆದ ಚಿತ್ರ)
Published On :
ಬಿಹಾರ: ಇಲ್ಲಿನ ಮಾದೇಪುರ ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸಮಾಧಿಯಾಗಿದ್ದ ದೇವಮಾನವನೊಬ್ಬ ಸಮಾಧಿಯಿಂದ ಎದ್ದು ಬಂದ ಘಟನೆ ವರದಿಯಾಗಿದೆ.
ಪ್ರಮೋದ್ ಬಾಬಾ ಎಂದು ಕರೆಯಲ್ಪಡುವ ದೇವಮಾನವ ಭಾನುವಾರ ಸಮಾಧಿಯಿಂದ ಹೊರೆಗೆ ಬಂದಿದ್ದಾರೆ . ಬಾಬಾ ಅವರು ಸುರಕ್ಷಿತರಾಗಿದ್ದಾರೆ. ಸಮಾಧಿಯಿಂದ ಹೊರ ಬಂದ ನಂತರ ಅವರು ವೈದ್ಯರನ್ನು ಭೇಟಿಯಾಗಿದ್ದಾರೆ ಎಂದು ಮಾದೇಪುರ ಎಸ್ಪಿ ವಿಕಾಸ್ ಕುಮಾರ್ ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿದ್ದಾರೆ.
ಆದಾಗ್ಯೂ, ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು ಈ ಬಾಬಾ ಸಮಾಧಿಯಾದುದನ್ನು ನೋಡಿಲ್ಲ ಎಂದು ವಿಕಾಸ್ ಕುಮಾರ್ ಹೇಳಿದ್ದಾರೆ.
ಇಲ್ಲಿ ಬಟ್ಗಾಮ್ ಗ್ರಾಮದಲ್ಲಿ ಫೆ. 28ರಂದು ಬಾಬಾ ಸಮಾಧಿಯಾಗಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ. 10 ಅಡಿ ಉದ್ದ, 10 ಅಡಿ ಅಗಲ ಮತ್ತು 15 ಅಡಿ ಆಳದ ಹೊಂಡದಲ್ಲಿ ಬಾಬಾ ಸಮಾಧಿಯಾಗಿದ್ದರು ಅಂತಾರೆ ಅವರ ಭಕ್ತರು. ಬಾಬಾ ಸಮಾಧಿಯಾಗಿರುವ ಬಗ್ಗೆ ಸುದ್ದಿ ತಿಳಿದ ಕೂಡಲೇ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು  ವೈದ್ಯರು ಸ್ಥಳಕ್ಕೆ ಧಾವಿಸಿದರೂ ಬಾಬಾ ನನ್ನು ಸಮಾಧಿಯಿಂದ ಹೊರಕ್ಕೆ ತರುವುದಕ್ಕೆ ಭಕ್ತರು ಅಡ್ಡಿಪಡಿಸಿದ್ದರು. ಆದ್ದರಿಂದ ಜಿಲ್ಲಾಡಳಿತದ ಅಧಿಕಾರಿಗಳು ಬಾಬಾ ನನ್ನು ಸಮಾಧಿಯಿಂದ ರಕ್ಷಿಸುವ ಕಾರ್ಯವನ್ನು ನಿಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.