ದೇಶ

ದೆಹಲಿ ಸರ್ಕಾರದಿಂದ ನಟ ಅಜಯ್ ದೇವಗನ್ ಗೆ ನೋಟೀಸ್

ನಿಷೇಧಿತ "ಪಾನ್ ಮಸಾಲ' ಹಾಗೂ ಇತರ ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಅಭಿನಯಿಸಿರುವ ಅಜಯ್ ದೇವಗನ್...

ದೆಹಲಿ ಸರ್ಕಾರದಿಂದ ನಟ ಅಜಯ್ ದೇವಗನ್ ಗೆ ನೋಟೀಸ್
ಅಜಯ್ ದೇವಗನ್
Published On :
ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಗೆ ದೆಹಲಿ ಸರ್ಕಾರ ನೋಟೀಸ್ ಜಾರಿಗೊಳಿಸಿದೆ.
ನಿಷೇಧಿತ "ಪಾನ್ ಮಸಾಲ' ಹಾಗೂ ಇತರ ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಅಭಿನಯಿಸಿರುವ ಅಜಯ್ ದೇವಗನ್ ಸೇರಿದಂತೆ ಕೆಲವು ಬಾಲಿವುಡ್ ನಟ ನಟಿಯರಿಗೆ ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ.
ಶಾರೂಖ್ ಖಾನ್, ಸೈಫ್ ಅಲಿ ಖಾನ , ಅರ್ಬಾ ಖಾನ್, ಗೋವಿಂದ ಹಾಗೂ ಸನ್ನಿ ಲಿಯೋನ್, ಅಜಯ್ ದೇವಗನ್ ಸೇರಿದಂತೆ ಮುಂತಾದ ನಟರಿಗೆ ನಿಷೇದಿತ ತಂಬಾಕು ಜಾಹೀರಾತುಗಳಲ್ಲಿ ಅಭಿನಯಸಿದಂತೆ ದೆಹಲಿಯ ಆರೋಗ್ಯ ಇಲಾಖೆ ಮನವಿ ಮಾಡಿತ್ತು.
ಇಲಾಖೆಯ ಮನವಿಗೆ ಸ್ಪಂದಿಸಿದ ಸನ್ನಿ ಲಿಯೋನ್ ಇನ್ನು ಮುಂದೆ ಇಂತಹ ಜಾಹಿರಾತುಗಳಲ್ಲಿ ಅಭಿನಯಿಸುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಇನ್ನುಳಿದ ಯಾವುದೇ ನಟರು, ಇಲಾಖೆಯ ಮನವಿಗೆ ಸ್ಪಂದಿಸಿಲ್ಲ. ಈ ಹಿನ್ನಲೆಯಲ್ಲಿ ಉಳಿದ ಕಲಾವಿದರಿಗೆ ನೋಟೀಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.