ದೇಶ

ಆರ್ ಎಸ್ ಎಸ್ ನ್ನು ಐಎಸ್ಐಎಸ್ ಗೆ ಹೋಲಿಕೆ ಮಾಡಿದ ಗುಲಾಂ ನಬಿ ಆಜಾದ್: ಬಿಜೆಪಿಯಿಂದ ಕ್ಷಮೆಯಾಚನೆಗೆ ಒತ್ತಾಯ

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಆರ್ ಎಸ್ ಎಸ್ ಹಾಗೂ ಉಗ್ರ ಸಂಘಟನೆ ಐಎಸ್ ಐ ನ್ನು ಹೋಲಿಕೆ ಮಾಡಿದ್ದಾರೆ.

ಆರ್ ಎಸ್ ಎಸ್ ನ್ನು ಐಎಸ್ಐಎಸ್ ಗೆ ಹೋಲಿಕೆ ಮಾಡಿದ ಗುಲಾಂ ನಬಿ ಆಜಾದ್: ಬಿಜೆಪಿಯಿಂದ ಕ್ಷಮೆಯಾಚನೆಗೆ ಒತ್ತಾಯ
ಗುಲಾಂ ನಬಿ ಆಜಾದ್
Published On :

ನವದೆಹಲಿ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಆರ್ ಎಸ್ ಎಸ್ ಹಾಗೂ ಉಗ್ರ ಸಂಘಟನೆ ಐಎಸ್ಐಎಸ್ ನ್ನು ಹೋಲಿಕೆ ಮಾಡಿದ್ದಾರೆ.

ಆರ್ ಎಸ್ ಎಸ್ ಸಂಘಟನೆಯನ್ನು ವಿರೋಧಿಸುವಂತೆಯೇ ನಾವು ಐಎಸ್ ಐ ಉಗ್ರ ಸಂಘಟನೆಯನ್ನು ವಿರೋಧಿಸುತ್ತೇವೆ, ಇಸ್ಲಾಂ ನಲ್ಲಿ ತಪ್ಪುಗಳನ್ನು ಮಾಡುವವರು ಆರ್ ಎಸ್ ಎಸ್ ಗಿಂತ ಕಡಿಮೆಯಲ್ಲ ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಗುಲಾಂ ನಬಿ ಆಜಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆರ್ ಎಸ್ ಎಸ್ ವಕ್ತಾರರೊಬ್ಬರು, ಗುಲಾಂ ನಬಿ ಆಜಾದ್ ಅವರ ಹೇಳಿಕೆ ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನವನ್ನು ತೋರುತ್ತದೆ, ಅಷ್ಟೇ ಅಲ್ಲದೇ ಐಎಸ್ಐ ನಂತಹ ಉಗ್ರ ಸಂಘಟನೆ ವಿರುದ್ಧ ಹೋರಾಡುವ ಇಚ್ಛಾಶಕ್ತಿಯ ಕೊರತೆಯನ್ನು ಬಯಲುಮಾಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಆರ್ ಎಸ್ ಎಸ್ ಸಂಘಟನೆಯನ್ನು ಉಗ್ರ ಸಂಘಟನೆಯೊಂದಿಗೆ ಹೋಲಿಸಿರುವ ಗುಲಾಂ ನಬಿ ಆಜಾದ್ ವಿರುದ್ಧ ಕಾನೂನು ಕ್ರಮದ ಮೊರೆ ಹೋಗುವುದಾಗಿ ಆರ್ ಎಸ್ ಎಸ್ ಹೇಳಿದೆ. ಇದೇ ವೇಳೆ ಗುಲಾಂ ನಬಿ ಆಜಾದ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.