ದೇಶ

ಯೋಗಕ್ಕೆ 'ಮುಸ್ಲಿಂ ತರಬೇತುದಾರರ ನೇಮಕದ ಮಾಹಿತಿಯನ್ನು ತಿರುಚಲಾಗಿದೆ: ಆಯುಷ್ ಇಲಾಖೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತರಬೇತುದಾರರನ್ನು ಮುಸ್ಲಿಂ ಸಮುದಾಯದಿಂದ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ವರದಿಯನ್ನು ಕೇಂದ್ರ ಆಯುಷ್ ಸಚಿವಾಲಯ ತಳ್ಳಿಹಾಕಿದೆ.

ಯೋಗಕ್ಕೆ 'ಮುಸ್ಲಿಂ ತರಬೇತುದಾರರ ನೇಮಕದ ಮಾಹಿತಿಯನ್ನು ತಿರುಚಲಾಗಿದೆ: ಆಯುಷ್ ಇಲಾಖೆ
ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುಸ್ಲಿಂ ತರಬೇತುದಾರರ  ನೇಮಕದ ಬಗ್ಗೆ ಇಲಾಖೆ ನೀಡಿದ್ದ ಆರ್ ಟಿಐ ಮಾಹಿತಿಯನ್ನು ತಿರುಚಲಾಗಿದೆ ಎಂದು ಆಯುಷ್ ಸಚಿವಾಲಯ ಹೇಳಿದೆ.

2015 ಜೂ.21 ರಂದು ನಡೆದ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ
ಹೊರದೇಶಗಳಿಗೆ ಯೋಗ ಕಲಿಸಲು ನೇಮಕ ಮಾಡಿಕೊಳ್ಳಲಾಗಿದ್ದವರ ಪೈಕಿ ಮುಸ್ಲಿಮ್ ತರಬೇತುದಾರರ ನೇಮಕದ ಬಗ್ಗೆ ಪತ್ರಕರ್ತ ಪುಷ್ಪ್ ಶರ್ಮ ಆರ್ ಟಿಐ ಮಾಹಿತಿ ಕೇಳಿದ್ದರು. ಆರ್ ಟಿಐ ಗೆ ನೀಡಲಾಗಿದ್ದ ಉತ್ತರವನ್ನು ತಿರುಚಿ ವರದಿ ಪ್ರಕಟ ಮಾಡಲಾಗಿದೆ ಎಂದು ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಮುಸ್ಲಿಮರನ್ನು ನೇಮಕ ಮಾಡಿಕೊಂಡಿಲ್ಲ ಎಂಬ ಉತ್ತರ ನೀಡಿದೆ ಎಂಬ ವರದಿ ಹುಫಿಂಗ್ ಟನ್ ಪೋಸ್ಟ್ ವರದಿ ಮಾಡಿತ್ತು. ವರದಿಯನ್ನು ನಿರಾಕರಿಸಿರುವ ಆಯುಷ್ ಸಚಿವಾಲಯ, ಆರ್ ಟಿಐ ಮಾಹಿತಿಗೆ ಸಚಿವಾಲಯ ನೀಡಿರುವ ಉತ್ತರವನ್ನು ತಪ್ಪಾಗಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ವರ್ಚಸ್ಸನ್ನು ಕುಗ್ಗಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದೆ.
ಆರ್ ಟಿಐ ಮಾಹಿತಿಗೆ ನೀಡಿರುವ ಉತ್ತರದ ಬಗ್ಗೆ ತಪಪು ವರದಿ ಪ್ರಕಟವಾಗಿರುವ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.   ತಪ್ಪು ವರದಿಯನ್ನು ಖಂಡಿಸಿರುವ ಇಲಾಖೆ ಈ ಬಗ್ಗೆ ಟ್ವೀಟ್ ಮಾಡಿದ್ದು ಟ್ವೀಟ್ ನಲ್ಲಿ ಆರ್ ಟಿಐ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಪತ್ರಕರ್ತ ಪುಷ್ಪ್ ಶರ್ಮಾ ಅವರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರತಿಯನ್ನು ದಾಖಲಿಸಿದೆ. ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸಲು 711 ಮುಸ್ಲಿಂ ಯೋಗ ತರಬೇತುದಾರರು ಅರ್ಜಿ ಸಲ್ಲಿಸಿದ್ದರು, ಈ ಪೈಕಿ ಯಾರನ್ನೂ ಯೋಗ ತರಬೇತುದಾರರಾಗಿ ಆಯ್ಕೆ ಮಾಡಲಾಗಿಲ್ಲ ಎಂದು ಆಯುಷ್ ಇಲಾಖೆ ಹೇಳಿತ್ತು ಎಂದು ಹುಫಿಂಗ್ ಟನ್ ಪೋಸ್ಟ್ ವರದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.